Kannada NewsLatest

ಪಂಡರಾಪುರ ವಿಠ್ಠಲನಿಗೆ ಮಹಾಪೂಜೆ ನೆರವೇರಿಸಿದ ಫಡ್ನವೀಸ್ ದಂಪತಿ

ಪಂಡರಾಪುರ ವಿಠ್ಠಲನಿಗೆ ಮಹಾಪೂಜೆ ನೆರವೇರಿಸಿದ ಫಡ್ನವೀಸ್ ದಂಪತಿ

ಆಷಾಡ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂದ್ರಪ್ರದೇಶ ಹಾಗೂ ತೆಲಂಗಾಣ ಸೇರಿ ದೇಶದ ವಿವಿಧೆಡೆಯಿಂದ ಬಂದಿರುವ ಸುಮಾರು 12 ಲಕ್ಷ ವಾರಕರಿಗಳು( ಭಕ್ತರು) ಶುಕ್ರವಾರ ಫಂಡರಪುರ ವಿಠ್ಠಲನ ದರ್ಶನ ಪಡೆದರು.

ಪ್ರಗತಿವಾಹಿನಿ ಸುದ್ದಿ : ಶುಕ್ರವಾರ ಬೆಳಗಿನ ಜಾವ 2.30 ಕ್ಕೆ ಸರ್ಕಾರ ವತಿಯಿಂದ ಮಹಪೂಜೆಯನ್ನು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಧರ್ಮಪತ್ನಿಯಾದ ಅಮೃತಾ ಫಡನವಿಸ್ ಹಾಗೂ ಒಂದು ತಿಂಗಳಗಳ ಕಾಲ ನಡೆದು ಬಂದ ಲಾತೂರ ಗ್ರಾಮದ ವಾರಕರಿ ಮಾರುತಿ ಚವ್ಹಾನ ಹಾಗೂ ಆತನ ಪತ್ನಿಯಾದ ಪ್ರಯಾಗಬಾಯಿ ಚವ್ಹಾಣ ನೆರವೆರಿಸಿದರು ನಂತರ ವಿಠ್ಠಲನ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಇಲ್ಲಿನ ಚಂದ್ರಭಾಗಾ ನದಿಯಲ್ಲಿ ಸನ್ಮಾನ ಮಾಡಿದ ವಾರಕರಿಗಳು ಸರದಿಯಲ್ಲಿ ನಿಂತು ಜಪಿಸುತ್ತಿದ್ದ ವಿಠ್ಠಲನ ನಾಮಸ್ಮರಣೆ ಮುಗಿಲು ಮುಟ್ಟಿತು, ಲಕ್ಷಾಂತರ ವಾರಕರಿಗಳು ಪಾದಯಾತ್ರೆ ಮೂಲಕ ಆಗಮಿಸಿ ವಿಠ್ಠಲನ ದರ್ಶನ ಪಡೆದರು, ಸುಮಾರು 8 ಕಿ.ಮೀ. ವರೆಗೆ ಭಕ್ತರ ಸಾಲು ಹರಡಿತ್ತು, ಫಂಡರಪುರ ಜಾತ್ರಾ ಮಹೋತ್ಸವಕ್ಕೆ 15 ದಿನಗಳಿಂದ ಆಳಂದಿಯಿಂದ ಹೊರಟಿದ್ದ ಸಂತ ಜ್ಞಾನೇಶ್ವರ ಮಹಾರಾಜ, ಹಾಗೂ ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ಫಂಡರಪುರಕ್ಕೆ ಆಗಮಿಸಿತ್ತು. ಪಲ್ಲಕ್ಕಿಯೊಂದಿಗೆ ಲಕ್ಷಾಂತರ ವಾರಕರಿಗಳು ಆಗಮಿಸಿದ್ದರು.

ಆಷಾಢ ಏಕಾದಶಿ ನಿಮಿತ್ತ ಪರರಾಜ್ಯಗಳಿಂದ ಬರುವ ಭಕ್ತರಿಗಾಗಿ ವಸತಿಗೃಹ, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಶಾಖೆ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಕ್ತರ ಅನೂಕೂಲಕ್ಕಾಗಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್‌ಗಳನ್ನು ಒದಗಿಸಿತ್ತು, ವಾರಕರಿಗಳ ಆರೋಗ್ಯ ಸೇವೆಗೆ ಸುಮಾರು 60 ವೈದ್ಯರು 20 ಆಂಬ್ಯುಲನ್ಸ್ಗಳ ವ್ಯವಸ್ಥೆ ಮಾಡಲಾಗಿತ್ತು, ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಪರಿಸರದಲ್ಲಿ ಸುಮಾರು 6 ಸಾವಿರ ಪೋಲಿಸರ ಬಿಗಿ ಭದ್ರತೆ ಕಲ್ಪಸಲಾಗಿತ್ತು. ///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button