ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಜಾಲವನ್ನು ಭೇದಿಸಿರುವ ಬೆಂಗಳೂರು ಪೊಲೀಸರು ಛೋಟಾ ತೆಲಗಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಹುಸೇನ್ ಮೋದಿ ಅಲಿಯಾಸ್ ಛೋಟಾ ತೆಲಗಿ, ಹರೀಶ್, ಶವರ್ ಅಲಿಯಾಸ್ ಸೀಮಾ ಹಾಗೂ ನಜ್ಮಾ ಫಾತಿಮಾ ಬಂಧಿತ ಆರೋಪಿಗಳು. ಬಂಧಿತರಿಂದ 2ಕೋಟಿಗೂ ಅಧಿಕ ಮೌಲ್ಯದ 443 ನಕಲಿ ಛಾಪಾ ಕಾಗದ ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಹಾಗೂ ಕಂದಾಯ ಭವನಕ್ಕೆ ಬರುತ್ತಿದ್ದವರೇ ಇವರ ಟಾರ್ಗೆಟ್ ಆಗಿದ್ದರು. ಈ ಹಿಂದೆ ಇದೇ ಪ್ರಕರಣದಲ್ಲಿ ಹುಸೇನ್ ಅಲಿಯಾಸ್ ಛೋಟಾ ತೆಲಗಿ ಜೈಲು ಸೇರಿದ್ದ. ಆದರೆ ಜಾಮೀನಿನ ಮೇಲೆ ಬಿಡುಗದೆಯಾಗಿ ಮತ್ತೆ ನಕಲಿ ಛಾಪಾ ಕಾಗದ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ