Belagavi NewsBelgaum NewsKarnataka NewsLatest
*ನಕಲಿ ಸಿಬಿಐ ಅಧಿಕಾರಿಯಿಂದ ಲಕ್ಷ ಲಕ್ಷ ವಂಚನೆ; ಆರೋಪಿಯನ್ನು ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಲಕ್ಷ ಲಕ್ಷ ರೂ. ಪಡೆದು ಪಂಗನಾಮ ಹಾಕಿದ ಖತರನಾಕ್ ನಕಲಿ ಸಿಬಿಐ ಅಧಿಕಾರಿಯನ್ನು ಮಂಗಳವಾರ ಮಾಳಮಾರುತಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಹುಕ್ಕೇರಿ ತಾಲೂಕಿನ ಇಸ್ಲಾಂಪುರಸ ದಯಾನಂದ ರಾಮು ಜೀನ್ರಾಳ (34) ಎಂಬ ನಕಲಿ ಸಿಬಿಐ ಅಧಿಕಾರಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ. ಈತ ತರಬೇತಿ ಶಾಲೆಯನ್ನು ತೆರೆದು ನಾನು ನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸಂದರ್ಭಕ್ಕೆ ತಕ್ಕಂತೆ ನಕಲಿ ಸಿಬಿಐ, ಇಡಿ, ಐಟಿ ಅಧಿಕಾರಿ ಎಂದು ನಂಬಿಸಿ ಕೋಟ್ಯಂತರ ರೂ. ಪಂಗನಾಮ ಹಾಕಿದ ಖಿಲಾಡಿ ನಕಲಿ ಅಧಿಕಾರಿಗೆ ಮಾಳಮಾರುತಿ ಪೊಲೀಸರು ಹಡೆಮುರಿ ಕಟ್ಟಿದ್ದಾರೆ. ಆರೋಪಿಯನ್ನು ಬೆಳಗಾವಿ ಎರಡನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಮಾಳಮಾರುತಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹಾಗೂ ಸ್ನೇಹಾ ಪಿ.ವಿ.ಶ್ಲಾಘನೆಗೆ ವ್ಯಕ್ತಪಡಿಸಿದ್ದಾರೆ.