Latest

*ನಕಲಿ ಐಪಿಎಸ್ ಅಧಿಕಾರಿ ಅರ್ಜುನ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಪೊಲೀಸರನ್ನೇ ವಂಚಿಸಿ, ಕೊನೆಗೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭುವನ್ ಕುಮಾರ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ. ತನ್ನ ಹೆಸರು ಅರ್ಜುನ್ ತಾನು ಪೊಲೀಸ್ ವರಿಷ್ಠಾಧಿಕಾರಿ. ತನ್ನ ಸಂಬಂಧಿಯೂ ಹಿರಿಯ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಪೊಲೀಸರನ್ನು ಪರಿಚಯಿಸಿಕೊಳ್ಳುತ್ತಿದ್ದ ಭುವನ್ ಕುಮಾರ್, ವರ್ಗಾವಣೆ ದಂಧೆಯನ್ನೇ ಬಂಡವಾಳ ಮಾಡಿಕೊಂಡಿದ್ದನಂತೆ.

ನಕಲಿ ಅಪಿಎಸ್ ಅಧಿಕಾರಿ ಮಾತು ಕೇಳಿ ಕೆಲ ಪೊಲೀಸರು ತಮಗೆ ಪೋಸ್ಟಿಂಗ್ ಮಾಡಿಕೊಂಡುವಂತೆ ಹಣ ನೀಡಿದ್ದಾರೆ. ಹಣ ಪಡೆದ ನಂತರದ ದಿನಗಳಲ್ಲಿ ಮತ್ತೆ ವಿಚಾರಿಸಿದರೆ ಎಸ್ಕೇಪ್ ಆಗುತ್ತಿದ್ದ ಎನ್ನಲಾಗಿದೆ. ಹೀಗೆ ಕೋಟ್ಯಂತರ ರೂಪಾಯಿ ಹಣ ವನ್ನು ಭುವನ್ ಕುಮಾರ್ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

ವ್ಯಕ್ತಿಯೊಬ್ಬರು ಸರ್ಕಾರಿ ಕೆಲಸ ಕೊಡುವುದಾಗಿ ಹೇಳಿ ವಂಚಿಸಿದ್ದಾಗಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಒಬ್ಬರು ದೂರು ದಾಖಲಿಸಿದ್ದಾರೆ. ದೂರು ದಾರನಿಂದಲೇ ಭುವನ್ ಗೆ ಕರೆ ಮಾಡಿಸಿ ಹಣ ಕೊಡುವುದಾಗಿ ಹೇಳಿ ಕರೆಸಿದ ಪೊಲೀಸರು ನಕಲಿ ಐಪಿಎಸ್ ಅಧಿಕಾರಿ ಭುವನ್ ನನ್ನು ಬಂಧಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button