Latest

29 ವಿಶ್ವ ವಿದ್ಯಾಲಯಗಳ ಹೆಸರಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ; ನಾಲ್ವರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದ 29ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿ, ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿರುವ ಬಗ್ಗೆ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸುಇದ ಸಿಸಿಬಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 1,500ಕ್ಕೂ ಅಧಿಕ ನಕಲಿ ಮಾರ್ಕ್ಸ್ ಕಾರ್ಡ್, 80 ನಕಲಿ ಸೀಲ್, 30 ಹಾಲೋಗ್ರಾಂ ಸ್ಟಿಕ್ಕರ್, 8 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಹಾಗೂ ಪಿಯು ಬೋರ್ಡ್, ಉತ್ತರ ಪ್ರದೇಶದ ಸಿ.ವಿ.ರಾಮನ್ ವಿವಿ, ದೆಹಲಿಯ ಸೆಕೆಂಡರಿ ಬೋರ್ಡ್, ಮೇಘಾಲಯದ ವಿಲಿಯಂ ಕ್ಯಾರಿ ಯುನಿವರ್ಸಿಟಿ ಸೇರಿದಂತೆ ದೇಶದ ಸುಮಾರು 29 ವಿಶ್ವವಿದ್ಯಾಲಯಗಳ ಅಂಕಪಟ್ಟಿ ನಕಲು ಮಾಡಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದರು.

ಇದು ಚುನಾವಣೆ ಗಿಮಿಕ್ ಅಲ್ಲ; ಖಡಕ್ ಉತ್ತರ ಕೊಟ್ಟ ಸಿಎಂ

https://pragati.taskdun.com/karnataka-maharastra-border-issuecm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button