Latest

ನಕಲಿ ನೋಟು ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರೆಡ್ ಮರ್ಕ್ಯೂರಿ ಕೊಳ್ಳಲು ಲಕ್ಷಾಂತರ ರೂಪಾಯಿ ನಕಲಿ ನೋಟು ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ.

ಉಜಿರೆ ಭಾಗದಿಂದ ಕಾರಿನಲ್ಲಿ 500 ರೂ.ಮುಖಬೆಲೆಯ 5 ಲಕ್ಷದ 50 ಸಾವಿರ ನಕಲಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದಾಗ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಹಾಂದಿಯಲ್ಲಿ ಪೊಲೀಸರ ಬಲೆಗೆ ಬದ್ದಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

Home add -Advt

ವಿಚಾರಣೆ ವೇಳೆ ಆರೋಪಿಗಳು ರೆಡ್ ಮಕ್ರ್ಯೂರಿ ಕೊಳ್ಳಲು ಹಣ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆರೋಪಿ ಸಂತೋಷ್ ರೆಡ್ ಮರ್ಕ್ಯೂರಿ ಕೊಡಿಸುವುದಾಗಿ ನಜೀರ್ ಎಂಬ ಆರೋಪಿಗೆ ಹೇಳಿದ್ದ. ನಜೀರ್ ಗ್ರಾಹಕನ ರೂಪದ ಮತ್ತೊಬ್ಬ ಆರೋಪಿ ಜುಬೇದ್‍ನಿಂದ ಹಣ ತಂದು ರೆಡ್ ಮರ್ಕ್ಯೂರಿ ಕೊಳ್ಳಲು ಸಿದ್ಧರಾಗಿ, ಹಣದೊಂದಿಗೆ ಚಿಕ್ಕಮಗಳೂರಿಗೆ ಬರುವಾಗ ಆಲ್ದೂರು ಬಳಿ ಪೊಲೀಸರು ಬಂಧಿಸಿದ್ದಾರೆ.

Related Articles

Back to top button