Belagavi NewsBelgaum NewsKannada NewsKarnataka News

ಬಾಲಪ್ರತಿಭೆ ದಿಯಾ ಹೆಗಡೆಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿ ಹನುಮಾನ್ ನಗರದ ಗ್ಲಾಸ್ ಹೌಸ್ ನಲ್ಲಿ ಭಾನುವಾರ ತುಂಬಿದ ಸಭಾಗೃಹದಲ್ಲಿ ಝೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಬೆಳಗಾವಿ ನಾಗರಿಕರು, ಹನುಮಾನ್ ಪ್ರಸಾದ ಸಮಿತಿಯ ಪದಾಧಿಕಾರಿ ಗಳಾದ  ರಾಹುಲ್ ಮೇತ್ರಿ,  ಡಿ.ಸಿ. ದೇಶಪಾಂಡೆ,  ಅಳಗುಂಡಗಿ ಮತ್ತು ಶ್ರೀ ಲಲಿತಾ ಆರಾಧನಾ ಮಂಡಳಿಯ ಪ್ರತಿಮಾ ಅಂಬೇಕರ್, ಭಾವನಾ ಕುಲ್ಕರ್ಣಿ, ಸುನೀತಾ ಮಾನೆ, ಸಾವಿತ್ರೀ ಪಾಟೀಲ್, ದೀಪಾ ದೇಶಪಾಂಡೆ, ಸಂಧ್ಯಾ ಭಟ್ ಸನ್ಮಾನಿಸಿದರು.

 ಶಿವಪುತ್ರ ಫಟ್ಕಲ್,  ಪ್ರಹಲ್ಲಾದ ಅಂಬೇಕರ್, ಚಿದಂಬರ ಕುಲ್ಕರ್ಣಿ,  ಜಯೇಂದ್ರ ಮಾನೆ,  ಗಣೇಶ್ ಹೆಗಡೆ, ಪರಮೇಶ್ವರ ಹೆಗಡೆ, ಸುಬ್ರಹ್ಮಣ್ಯ ಭಟ್ ಮತ್ತು  ಸೀತಾರಾಂ ಭಾಗ್ವತ್ ಮೊದಲಾದವರು ಉಪಸ್ಥಿತರಿದ್ದರು.

Home add -Advt

ಈ ಸಂದರ್ಭದಲ್ಲಿ ದಿಯಾ ಹೆಗಡೆ ಮತ್ತು ಸಹೋದರಿ ದಿಶಾ ಹೆಗಡೆಯವರನ್ನು ಸನ್ಮಾನಿಸಲಾಯಿತು.

ದಿಯಾ ಹೆಗಡೆ ಸನ್ಮಾನಕ್ಕೆ ಉತ್ತರಿಸಿ, ಬೆಳಗಾವಿಯ ನಾಗರಿಕರು ಹಾಗೂ ಕಾರ್ಯಕ್ರಮ ಸಂಘಟಕರಿಗೆ ಧಾನ್ಯವಾದ ಹೇಳಿದರು. ಕೊನೆಯಲ್ಲಿ, ದಿಶಾ ಹೆಗಡೆಯವರು ಶ್ಲೋಕ, ಹಾಡು, ಮತ್ತು ಸಿನೆಮಾ ಸಂಗೀತ ಪ್ರಸ್ತುತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button