Belagavi NewsBelgaum NewsKannada NewsKarnataka News

*ಸುಳ್ಳು ಅತ್ಯಾಚಾರ ಆರೋಪ: 13 ಜನರಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಸ್ಕಾಂ ಮಾಜಿ ಕಾರ್ಯಪಾಲಕ ಇಂಜಿನಿಯರ್ ಟಿ.ಬಿ.ಮಜ್ಜಗಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ 13 ಮಂದಿಯನ್ನು ದೋಷಿ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 

ಅತ್ಯಾಚಾರದ ದೂರುದಾರೆ ಬಿ.ವಿ ಸಿಂಧೂ ಸೇರಿ 13 ಜನರಿಗೆ 3 ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ 13 ಆರೋಪಿಗಳಿಗೂ ತಲಾ 86 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿದೇವಿ ಮಹತ್ವದ ತೀರ್ಪು ಹೊರಡಿಸಿದ್ದಾರೆ.

ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರಾಮ್ ಮಜ್ಜಗಿ ವಿರುದ್ಧ ಬಿ.ವಿ ಸಿಂಧೂ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. 2014 ನವೆಂಬರ್ 19ರಂದು ಮಾಳಮಾರುತಿ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಕೇಸ್‌ ದಾಖಲಾಗಿತ್ತು.

ದೂರಿನ ಆಧಾರದ ಮೇಲೆ ಪೊಲೀಸರು ಟಿ.ಬಿ.ಮಜ್ಜಗಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಇದೊಂದು ಸುಳ್ಳು ಪ್ರಕರಣ ಎಂದು ತಿಳಿದು ಬಂದಿದೆ. ಅವರು ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಿದ್ದರು. ಅಂದಿನಿಂದ ಸುಧೀರ್ಘ ವಿಚಾರಣೆ ನಡೆಸಿದ ಪೀಠವು, ಇಂದು ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿದೇವಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.

Home add -Advt

ಮೈಸೂರಿನ ಬೆಸ್ಕಾಂ ಸಹಾಯಕ ಅಭಿಯಂತೆ ಬಿ.ವಿ. ಸಿಂಧು, ಹೆಸ್ಕಾಂ ಸಹಾಯಕ ಲೈನ್‌ಮ್ಯಾನ್ ನಾಥಾಜಿ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅಜಿತ ಪೂಜಾರಿ, ಹೆಸ್ಕಾಂ ಸಹಾಯಕ ಲೈನ್‌ಮ್ಯಾನ್ ಮಲಸರ್ಜ ಶಹಾಪುರಕರ, ಕಿರಿಯ ಇಂಜಿನಿಯರ್ ಸುಭಾಸ ಹಲ್ಲೋಳ್ಳಿ, ಲೈನ್‌ಮ್ಯಾನ್ ಈರಪ್ಪ ಎಂ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ಎಸ್ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಎಲ್ ಗೋಡಲಕುಂದರಗಿ, ಹೆಸ್ಕಾಂ ಸ್ಟೇಷನ್ ಅಟೆಂಡರ್ ಗ್ರೇಡ್-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮ್ಯಾನ್ ಈರಯ್ಯ ಗುರಯ್ಯ ಹಿರೇಮಠ, ಲೈನ್‌ಮ್ಯಾನ್ ಮಾರುತಿ ಭರಮಾ ಪಾಟೀಲ, ಹೆಸ್ಕಾಂ ನಿವೃತ್ತ ಸಹಾಯಕಿ ದಾಕ್ಷಾಯಣಿ ಮಹಾದೇವ ನೇಸರಗಿ ಎಂಬವರಿಗೆ ಮೂರುವರೆ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button