*ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ: ಡಿಸಿಪಿ ರೋಹನ್ ಜಗದೀಶ್ ಮಾರ್ಗದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮಪಟ್ಟರೆ ಮುಂದಿನ ದಾರಿ ಸುಗಮ. ನೀವು ಮಾಡುವಂತಹ ಸಾಧನೆ, ನೀವು ಕಲಿತ ಮಹಾವಿದ್ಯಾಲಯ ಮೆಚ್ಚಿ ನಿಮ್ಮನ್ನು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವಂತಿರಬೇಕೆಂದು ಡಿಸಿಪಿ ರೋಹನ್ ಜಗದೀಶ ಅಭಿಪ್ರಾಯಪಟ್ಟರು.
ಶುಕ್ರವಾರದಂದು ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕೆ.ಕೆ. ವೇಣುಗೋಪಾಲ ಸಭಾಗೃಹದಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನ, ಜಿಮಖಾನಾ ದಿನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್ ಉಪಸ್ಥಿತರಿದ್ಧರು.
ಆರ್ ಎಲ್ ಕಾನೂನು ಮಹಾವಿದ್ಯಾಲಯದ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಆರ್.ಎಸ್. ಮುತಾಲಿಕ ಅಧ್ಯಕ್ಷತೆಯನ್ನು ವಹಿಸಿದ್ದರು. ಗಣ್ಯರ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಎಂ.ಕೆ. ನಂಬಿಯಾ ಸುವರ್ಣ ಪದಕ, ಯೂನಿವರ್ಸಿಟಿ ಬ್ಲೂ ಮತ್ತು ವಾರ್ಷೀಕ ಕ್ರೀಡೆಗಳಲ್ಲಿ ಸಾಧನೆಗೈದ ಹಾಗೂ ಮೂಟ್ ಕೋರ್ಟ್, ಕ್ಲಾಸ್ ಟಾಪರ್ಸ್ ಹಾಗೂ ಇನ್ನಿತರ ಸ್ಪರ್ಧೆಯ ವಿಜೇತರಿಗೆ ಪಾರಿತೋಷಕ ವಿತರಣೆಯನ್ನು ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್, ಅವರು ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮಪಟ್ಟರೇ ಮುಂದಿನ ಸುಗಮ ದಾರಿಯನ್ನು ಕಂಡುಕೊಂಡು ಗುರಿಯನ್ನು ಮುಟ್ಟಿ, ನೆಮ್ಮದಿಯ ಜೀವನವನ್ನು ಮಾಡಬಹುದು. ನಿಮ್ಮ ಸಾಧನೆ ಎಲ್ಲರೂ ಗುರುತಿಸುವಂತಿರಬೇಕು. ಮುಂದೊಂದು ದಿನ ನೀವು ಕಲಿತ ವಿದ್ಯಾಲಯವೇ ನಿಮ್ಮನ್ನ ಮುಖ್ಯ ಅತಿಥಿಗಳಾಗಿ ಆಹ್ವಾನಿಸಬೇಕು. ಅಂತಹ ಸಾಧನೆಯನ್ನು ಮಾಡಬೇಕು. ಅವಕಾಶಗಳು ಒಲಿದು ಬರುತ್ತವೆ ಅವುಗಳ ಸದುಪಯೋಗ ಪಡೆದುಕೊಂಡರೇ ಜೀವನ ಕಠಿಣವೆನಿಸಲ್ಲವೆಂದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ