
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಸಾಲ ತೀರಿಸಲಾಗದೆ, ಕೈಗೆ ಬಂದ ಬೆಳೆಗೂ ಸೂಕ್ತ ಬೆಲೆ ಸಿಗದೆ ರೈತರೃನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಖಾನಾಪುರ ತಾಲೂಕಿನ ಬಿದರಬಾವಿಯ ಕಲ್ಲಪ್ಪ ಅಪ್ಪಾಜಿ ಪಾಟೀಲ (70) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು 2 ಎಕರೆ ಜಮೀನು ಹೊಂದಿದ್ದು, ವಿವಿಧ ಬ್ಯಾಂಕ್ ಗಳಲ್ಲಿ 4.50 ಲಕ್ಷ ರೂ. ಸಾಲ ಮಾಡಿದ್ದರು.
ಬೆಳೆದಿದ್ದ ಮೆಣಸಿನ ಕಾಯಿಗೂ ಸೂಕ್ತ ಬೆಲೆ ಸಿಗದೆ ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆಯಿಂದ ಮನೆಯಲ್ಲಿಯೇ ವಿಷ ಸೇವಿಸಿದ್ದಾರೆ. ತಕ್ಷಣ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ.
ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗ ನಾರಾಯಣ ಪಾಟೀಲ ದೂರು ದಾಖಲಿಸಿದ್ದಾರೆ.