ಪ್ರಗತಿವಾಹಿನಿ ಸುದ್ದಿ, ರಾಯಬಾಗ: ಗಡಿ ಜಿಲ್ಲೆ ಬೆಳಗಾವಿಯಲ್ಲಿರುವ ಎಲ್ಲಾ ನದಿಗಳು ಬತ್ತಿ ಹೋಗಿವೆ. ನದಿಯಲ್ಲಿ ನೀರು ಇಲ್ಲದೆ ನದಿಯಿಂದ ಮೊಸಳೆಗಳು ಹೊರ ಬರುತ್ತಿವೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ನದಿಯಿಂದ ಮೊಸಳೆ ಜಮೀನಿನತ್ತ ಬಂದಿದೆ.
ಬಾವನ ಸೌಂದತ್ತಿ ಗ್ರಾಮದ ಗಂಗಾಧರ ಮಂಗಸುಳೆ ಎಂಬುವರ ಜಮೀನಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ ಆಗಿದ್ದು, ರೈತ ಒಂದು ಕ್ಷಣ ಭಯಭೀತರಾಗಿದ್ದಾರೆ.
ಕೃಷ್ಣ ನದಿಯಲ್ಲಿ ನೀರು ಇಲ್ಲದ ಕಾರಣ ಮೊಸಳೆ ಜಮೀನಿನತ್ತ ಬಂದಿದೆ. ಮೊಸಳೆ ಕಂಡು ಭಯಭೀತರಾದ ಸುತ್ತಮುತ್ತಲಿನ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ