Kannada NewsKarnataka News

ಸಮಗ್ರ ಕೃಷಿ ನೀತಿ ಜಾರಿಗೆ ತಂದಲ್ಲಿ ರೈತರು ಸ್ವಾವಲಂಬಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ರಾಜ್ಯ ಹಾಗೂ ಕೇಂದ್ರ ಸರಕಾರ ಸಾಲಮನ್ನಾ ಮಾಡಿ ರೈತರನ್ನು ಪರವಲಂಬಿಮಾಡದೆ ಸಮಗ್ರ ಕೃಷಿ ನೀತಿ ಜಾರಿಗೆ ತಂದಲ್ಲಿ ರೈತರು ಆರ್ಥಿಕವಾಗಿ ಸದೃಡವಾಗಲು ಸಾಧ್ಯವಾಗುತ್ತದೆ ಎಂದು ಬಿಡಿಸಿಸಿಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಪಟ್ಟಣದ ವಿಶ್ವರಾಜ ಭವನದಲ್ಲಿ ಹುಕ್ಕೇರಿ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ ರಮೇಶ ಕತ್ತಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿ ಮಾತನಾಡಿದರು.
ಸರ್ಕಾರ ಪ್ರತಿವರ್ಷ ಸಾಲಮನ್ನಾ ಮಾಡುತ್ತಿದರೂ ಕೂಡ ರೈತರ ಆತ್ಮಹತ್ಯೆ ನಡೆಯುವಲ್ಲಿ ವಿಫವಾಗಿದೆ, ಇದಕ್ಕೆ ಸಾಲ ಮನ್ನಾ ಪರಿಹಾರವಲ್ಲ. ಸಮಗ್ರ ಕೃಷಿ ನೀತಿ ಜಾರಿಮಾಡುವುದರಿಂದ ರೈತರನ್ನು ಸ್ವಾಲಂಬಿ ಬದುಕು ಸಾಗಿಸಲು ಅವಕಾಶ ಮಾಡಿಕೊಟ್ಟು ರೈತರ ಜೀವ ಇಳಿಸುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿದರು.
ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕಿನಿಂದ ೨.೬೮ ಲಕ್ಷ ರೈತಸದಸ್ಯರಿಗೆ ೧೬೪೨ ಕೋಟಿ ರೂ ನಿಯಮಾವಳಿಯ ಅನುಗುಣವಾಗಿ ಸಾಲವಿತರಣೆಯಾಗಿದೆ. ಪ್ರಾಥಮಿಕ ಸಹಕಾರಿ ಸಂಘಗಗಳಲ್ಲಿ ೧೨ತಿಂಗಳು ಸಾಲ ಮರುಪಾವತಿ ಮಾಡಿಕೊಳ್ಳುವ ಪದ್ದತಿ ಅನುಸರಿಕೊಂಡಲ್ಲಿ ಸಂಘಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಣೆಯಾಗಲು ಸಾಧ್ಯವಾಗುತ್ತಿದೆ,
ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಳಿಗೆ, ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಿಂದ ಸಿಸಿ ಸಾಲ ನೀಡುವುದಕ್ಕೆ ಆಡಳಿತ ಮಂಡಳಿ ಚಿಂತನೆಯಾಗಿದೆ, ರೈತರ ಆರ್ಥಿಕಮಟ್ಟ ಸುಧಾರಣೆಗಾಗಿ ಪ್ರತಿ ಕುಟುಂಬಕ್ಕೆ ೨ಆಕಳು ಅಥವಾ ಎಮ್ಮೆ ವಿತರಿಸುವ ಚಿಂತನೆ ಮಾಡಲಾಗುತ್ತಿದೆ,ಇದರ ಜತೆಗೆ ೨೦೨೫ವರ್ಷದಲ್ಲಿ ೩ ಲಕ್ಷ ರೈತ ಸದಸ್ಯರಿಗೆ ೩ ಸಾವಿರ ೫೦೦ಕೋಟಿ ರೂ ಸಾಲ ವಿತರಿಸುವ ಗುರಿಹೊಂದಲಾಗಿದೆ.
ಹುಕ್ಕೇರಿ ತಾಲೂಕಿನ ೪೦ಸಾವಿರ ರೈತರಿಗೆ ೨೪೭ಕೋಟಿ ಸಾಲವಿತರಿಸಲಾಗಿದೆ, ವೈದ್ಯನಾಥ ಆಯೋಗ ಸೇರಿದಂತೆ ೫ ಬಾರಿ ಸಾಲಮನ್ನಾ ಸೌಲಭ್ಯ ಪಡೆದುಕೊಂಡಿದೆ, ಎಂದು ಸತಂಸ ವ್ಯಕ್ತಪಡಿಸಿದರು.
ಸಾಲ ಮರುಪಾವತಿಗೆ ಮಾಡಲು ರೈತರಿಗೆ ಕಷ್ಟವಾಗುತ್ತಿತ್ತು, ಇದನ್ನು ಮನಗಂಡು ತಾಲೂಕಿನ ಎಲ್ಲ ರೈತರ ಸಾಲ ನಾವೇ ಮರುಪಾವತಿ ಮಾಡಲು ಅವಕಾಶಮಾಡಿಕೊಟ್ಟ ರೈತರಿಗೆ ಅಭಾರಿಯಾಗಿದ್ದೇವೆಂದರು.
ಸಂಗಮ ಸಕ್ಕರೆ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿ ತಾಲೂಕಿನ ಪ್ರಾಥಮಿಕ ಸಹಕಾರಿ ಸಂಘಗಳ ಬೆಳವಣಿಗೆ ರಮೇಶ ಕತ್ತಿ ಅವರ ಕೂಡಗೆ ಅಪಾರವಾಗಿದೆ ಎಂದರು.
ಸಂಕೇಶ್ವರ ಸಕ್ಕರೆ ಕಾರಖಾನೆ ಅಧ್ಯಕ್ಷ ಅಪ್ಪಾಸಾಹೇಬ ಶೀರಕೊಳಿ, ಟಿಎಪಿಎಮ್ ಸಿ ಅಧ್ಯಕ್ಷ ಕಲ್ಲಪ್ಪಣ್ಣಾ ಚೌಗಲಾ, ಎಪಿಎಮ್‌ಸಿಅಧ್ಯಕ್ಷ ಕಲಗೌಡ ಪಾಟೀಲ, ಪಿಎಲ್‌ಡಿಬ್ಯಾಂಕ ಅಧ್ಯಕ್ಷ ರಾಚಯ್ಯಾ ಹಿರೇಮಠ, ತಾಲೂಕಿನ ಪಿಕೆಪಿಎಸ್ ಅಧ್ಯಕ್ಷರು ಸದಸ್ಯರು ರೈತರು ಉಪಸ್ಥಿತರಿದ್ದರು. ಸುಲ್ತಾನಪೂರ ಪ್ರಾಥಮಿಕ ಕೃಷಿ ಪತ್ತಿಹ ಸಹಕಾರಿ ಸಂಘದ ಕಾರ್ಯನಿವಾರ್ಹಹ ಅಧಿಕಾರಿ ಮಲ್ಲಿಕಾರ್ಜುನ ಜಕ್ಕಪ್ಪಗೋಳ ಸ್ವಾಗತಿಸಿದರು, ತಾಲೂಕಾ ನಿಯಂತ್ರನಾಧಿಕಾರಿ ಎಸ್,ಬಿ, ಸನದಿ, ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button