ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕೃಷಿಕರಿಗೆ ತಾಂತ್ರಿಕ ಬೆಂಬಲ ಮತ್ತು ತಾಂತ್ರಿಕ ಉನ್ನತೀಕರಣದ ಲಾಭವನ್ನು ದೊರಕಿಸಿಕೊಡುವ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅದಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವರು ಸಚಿವ ನರೇಂದ್ರ ಸಿಂಗ್ ತೋಮರ ಉತ್ತರ ಪೂರೈಸಿದ್ದಾರೆ.
ಕೃಷಿಕರಿಗೆ ಡಿಜಿಟಲ್ ಇಂಡಿಯಾ ಕಾರ್ಪೋರೇಶನ್ ಮೂಲಕ ತಾಂತ್ರಿಕ ಬೆಂಬಲ ಮತ್ತು ತಾಂತ್ರಿಕ ಉನ್ನತೀಕರಣದ ಲಾಭವನ್ನು ದೊರಕಿಸಿಕೊಡಲು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಮತ್ತು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (ಡಿಐಸಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಡುವೆ 9, ಜೂನ್ 2021 ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು ಈ ಒಪ್ಪಂದವನ್ನು ಜಾರಿಗೆ ತರಲಾಗಿದೆ.
ಡಿಜಿಟಲ್ ಪ್ಲಾಟ್‌ಫಾರ್ಮ ಆಗಿರುವ ಕೃಷಿ-ಮಾಹಿತಿ ಸಂಪನ್ಮೂಲಗಳ ಆಟೋ-ಟ್ರಾನ್ಸ್ ಮಿಷಿನ್ ಮತ್ತು ಟೆಕ್ನಾಲಜಿ ಹಬ್ ಇಂಟರ್ಫೇಸ್ (ಕಿಸಾನ್ ಶರತಿ) ಅನ್ನು ಜಂಟಿಯಾಗಿ ಜಾರಿಗೆ ತರುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಇದನ್ನು ಆರಂಭದಲ್ಲಿ ಭಾರತಿಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಪರಿಕಲ್ಪಿಸಿದೆ ಮತ್ತು ಈಗ ಜಂಟಿಯಾಗಿ ಜಾರಿಗೆ ತಂದಿದೆ ಡಿಜಿಟಲ್ ಇಂಡಿಯಾ ಕಾರ್ಪೋರೇನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೈತರಿಗೆ ಇತ್ತಿಚಿನ ಕೃಷಿ ತಾಂತ್ರಿಕ ಜ್ಞಾನ ನೀಡಿದೆ. ಇದು ರೈತರಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸ್ಥಳಿಯ ಭಾಷೆಯಲ್ಲಿ ಮಲ್ಟಿಮಿಡಿಯಾ ಮೂಲಕ ಸ್ಥಳದ ನಿರ್ದಿಷ್ಟ ಕೃಷಿ ತಾಂತ್ರಿಕ ಮಾಹಿತಿ ಮತ್ತು ಸಲಹೆಗಳನ್ನು ತಲುಪಿಸಲು ಸಂವಾದಾತ್ಮಕ ಡಿಜಿಟಲ್ ಸಲಹೆ ವ್ಯವಸ್ಥೆಯಾಗಿದೆ ಮತ್ತು ಇದನ್ನು ಅಭಿವೃದ್ಧಿಪಡಿಸಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಳೆ ಬೆಳಗ್ಗೆಯೇ ಸಿಎಂ ಬೊಮ್ಮಾಯಿ ದೆಹಲಿಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ