ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ರಾಜ್ಯದ ಎಲ್ಲಾ ಬಗೆಯ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಶಾಸಕರಾದ ಯು.ಟಿ. ಖಾದರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ವರ್ಷ ದೊಡ್ಡ ರೈತರಿಗೆ ಸಬ್ಸಿಡಿ ಪ್ರಮಾಣ ಕಡಿತ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನಿ ನೀರಾವರಿ ಯೋಜನೆಗಳಿಗೆ ಈ ಹಿಂದಿನಂತೆಯೇ ಸಬ್ಸಿಡಿ ಮುಂದುವರೆಸುವುದರ ಜೊತೆಗೆ ಸಣ್ಣ, ಅತೀ ಸಣ್ಣ ರೈತರಿಗಷ್ಟೇ ಇದ್ದ ಸೌಲಭ್ಯವನ್ನು ಇತರ ರೈತರಿಗೂ ವಿಸ್ತರಿಸಿದ್ದಾರೆ.
ಎಲ್ಲಾ ರೀತಿಯ ರೈತರು ಗರಿಷ್ಠ 5 ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆಯ ಅನುಕೂಲ ಪಡೆಯಬಹುದಾಗಿದೆ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರ ದೃಢೀಕರಣ ಪ್ರಮಾಣಪತ್ರ ಪಡೆಯಲು ಆಗುತ್ತಿದ್ದ ಅಡ್ಡಿ ಬಗೆಹರಿದಿದೆ ಎಂದರು.
ಕನ್ನಡ ಬಾವುಟ ಸುಟ್ಟ ಘಟನೆ; ಖಂಡನಾ ನಿರ್ಣಯ ಮಂಡನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ