ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಅತಿ ವೇಗದಲ್ಲಿ ಬಂದ ಕಾರು ಟೋಲ್ ಪ್ಲಾಝಾದಲ್ಲಿ ನಿಂತಿದ್ದ ಕಾರು ಗುರುವಾರ ರಾತ್ರಿ 6 ವಾಹನಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕಾರು ವರ್ಲಿಯಿಂದ ಬಾಂದ್ರಾ ಕಡೆಗೆ ಹೊರಟಿತ್ತು. ಮೊದಲು ಟೋಲ್ ಪ್ಲಾಝಾದಲ್ಲಿ ನಿಂತಿದ್ದ ಮರ್ಸಿಡಿಸ್ ಕಾರಿಗೆ ಹಿಂಬದಿಯಿಂದ ಬಲವಾಗಿ ಗುದ್ದಿತು. ಅಲ್ಲಿಂದ ಮುಂದೆ ಸಾಗಿ ಇನ್ನೂ ಐದು ವಾಹನಗಳಿಗೆ ಡಿಕ್ಕಿಹೊಡೆದು ನಿಂತಿತು. ಗಂಭೀರ ಗಾಯಗೊಂಡವರನ್ನು ಭಾಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತದಲ್ಲಿ ಎಲ್ಲ ವಾಹನಗಳು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅಪಘಾತಕ್ಕೆ ಕಾರಣವಾದ ಇನ್ನೋವಾ ವಾಹನದ ಚಾಲಕನ ಸ್ಥಿತಿಯೂ ಗಂಭೀರವಾಗಿದೆ. ಆತ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಂತೆ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಕೃಷ್ಣಕಾಂತ್ ಉಪಾಧ್ಯಾಯ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ