Belagavi NewsBelgaum News

*ಗ್ರಾಮ ಪಂಚಾಯತಿ ಸೆಕ್ರೆಟರಿ ಮೇಲೆ ಮಾರಣಾಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮೇಲೆ ರಾಡ್ ಹಾಗೂ ಮಚ್ಚಿನಿಂದ ಮಾರಣಾಂತಿಕ ‌ಹಲ್ಲೆ ನಡೆಸಿರುವ ಘಟನೆ ನಡೆದಿದೆ. 

ಬೆಳಗಾವಿ ತಾಲೂಕಿನ ಗೋಜಗಾ ಗ್ರಾಮದ ಬಳಿ ಅಂಬೇವಾಡಿ ಗ್ರಾಮ ಪಂಚಾಯ್ತಿ  ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಎಂಬುವವರ ಮೇಲೆ  ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿಯಾದ್ದಾರೆ.

ಬೈಕ್ ಮೇಲೆ ಹೊರಟಿದ್ದ ಕಾರ್ಯದರ್ಶಿ ನಾಗಪ್ಪ ಕೊಡ್ಲಿಯವರ ಮೇಲೆ ಅಟ್ಯಾಕ್ ಮಾಡಲಾಗಿದೆ. ಪಂಚಾಯ್ತಿಯಲ್ಲಿ ಅಕ್ರಮ ಪಹಣಿ ಸೃಷ್ಟಿಸಿ ಕೊಡುವಂತೆ ನಾಗಪ್ಪ ಮೇಲೆ ಒತ್ತಡ ಹಾಕಲಾಗಿತ್ತು ಎನ್ನಲಾಗಿದೆ. ಕಳದೆ ಒಂದು ವರ್ಷದಿಂದ ನಾಗಪ್ಪ ಬೆನ್ನು ಬಿದ್ದು ಪಂಚಾಯ್ತಿ ಅಧ್ಯಕ್ಷ ಮತ್ತು ಅವನ ಪುತ್ರ ನಾಗಪ್ಪನನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ‌.  ಇದಕ್ಕೆ ಒಪ್ಪದಿದ್ದಾಗ ಬೈಕ್ ಮೇಲೆ ಹೋಗುತ್ತಿದ್ದವನ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೇರಿ ಅವನ ಮಗ ಚೇತನ್ ಪಾಟೀಲ್ ಸೇರಿ ಮೂವರಿಂದ ಅಟ್ಯಾಕ್ ಆಗಿದೆ ಎಂದು ಆರೋಪಿಸಲಾಗಿದೆ. ಸಧ್ಯ ಗಂಭೀರವಾಗಿ ಗಾಯಗೊಂಡ ನಾಗಪ್ಪನನ್ನು  ಬೀಮ್ಸ್ ಆಸ್ಪತ್ರೆಗೆ ‌ದಾಖಲಿಸಿ ಚಿಕಿತ್ಸೆ  ನೀಡಲಾಗುತ್ತಿದೆ. ಬೆಳಗಾವಿ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ‌.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button