CrimeKannada NewsKarnataka News

*ಅನ್ಯಜಾತಿ ಯುವಕನ್ನು ಪ್ರಿತಿಸಿದಕ್ಕೆ ಮಗಳನ್ನೆ ಸುಟ್ಟು ಹಾಕಿದ ತಂದೆ*

ಪ್ರಗತಿವಾಹಿನಿ ಸುದ್ದಿ : ಕಲಬುರಗಿಯಲ್ಲಿ ಬೆಚ್ಚಿಬೀಳಿಸ  ಘಟನೆ ನಡೆದಿದೆ. ಮರ್ಯಾದೆ ಪ್ರಶ್ನೆಗೆ ಹೆತ್ತಪ್ಪನೇ ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿ, ಸುಟ್ಟು ಹಾಕಿದ್ದಾರೆ. 

ಕಲಬುರಗಿ ಮೇಳಕುಂದಾ (ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕವಿತಾ ಕೊಲೆಯಾದ ಮಗಳು. ಸದ್ಯ ಫರಹತಬಾದ್ ಠಾಣೆ ಪೊಲೀಸರು ತಂದೆ ಶಂಕರ್ ಕೊಳ್ಳುರು ಬಂಧಿಸಿದ್ದಾರೆ. ಕೊಲೆಗೆ ಸಾಥ್ ನೀಡಿದ್ದ ಶರಣು ಮತ್ತು ದತ್ತಪ್ಪ ಬಂಧನಕ್ಕೆ ಬಲೆ ಬಿಸಿದ್ದಾರೆ.‌

ಲಿಂಗಾಯತ ಸಮಾಜದ ಯುವತಿ ಅದೇ ಗ್ರಾಮದ ಕುರುಬ ಸಮಾಜದ ಯುವಕ ಮಾಳಪ್ಪ ಪೂಜಾರಿಯನ್ನು ಪ್ರೀತಿಸುತ್ತಿದ್ದಳು. ಕಲಬುರಗಿ ನಗರಕ್ಕೆ ಪಿಯುಸಿ ಅಧ್ಯಯನಕ್ಕೆ ಬರುತ್ತಿದ್ದ ವೇಳೆ ಪ್ರೀತಿ ಮಾಡಿದ್ದರು. ಮೂರ್ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಪ್ರೀತಿ ವಿಷಯ ತಿಳಿದಿದ್ದು, ಕಾಲೇಜು ಬಿಡಿಸಿದ್ದರು ಈ ಮಧ್ಯೆ ಕವಿತಾ ಮಾಳಪನನ್ನು ಮದುವೆ ಆಗುತ್ತೇನೆ. ಮದುವೆ ಮಾಡದಿದ್ದರೆ ಓಡಿ ಹೋಗುತ್ತೇನೆ ಎಂದು ಹೇಳಿದ್ದಳು. 

ಮನೆಯವರು ಅನ್ಯ ಜಾತಿಯ ಯುವಕನನ್ನು ಮದುವೆ ಆಗುವುದನ್ನು ನಿರಾಕರಿಸಿದ್ದು, ಹೆದರಿಸಿದ್ದಾರೆ. ಆದರೂ ಕವಿತಾ ಪಟ್ಟು ಬಿಡದೇ ಮದುವೆ ಆಗುತ್ತೇನೆಂದು ಹಠ ಹಿಡಿದಿದ್ದಳು. ಈ ನಡುವೆ ಮಧ್ಯರಾತ್ರಿ ಯುವತಿ ತಂದೆ ಶಂಕರ್​, ಸಹೋದರ ಶರಣು, ಸಂಬಂಧಿ ದತ್ತು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಕ್ರಿಮಿನಾಶಕ ಸಿಂಪಡಿಸಿ ವಿಷ ಸೇವಿಸಿ, ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾರೆ. ನಂತರ ಬೆಳಗ್ಗೆ ಗ್ರಾಮದ ಹೊರವಲಯದ ಸಂಬಂಧಿಕರ ಜಮೀನಿನಲ್ಲಿ ದೇಹವನ್ನು ಸುಟ್ಟು ಹಾಕಿದ್ದಾರೆ.

Home add -Advt

ಹೆತ್ತ ಮಗಳನ್ನು ಕೊಂದು ಮೊದಲು ಆತ್ಮಹತ್ಯೆ ಕುಡಿದುಕೊಂಡಿದ್ದಾಳೆಂದು ಬಿಂಬಿಸಿದ್ದರು. ಆದರೆ ಪೊಲೀಸರ ತನೀಖೆಯ ವೇಳೆ ಈ ಘನಘೋರ ಕೃತ್ಯ ಬಯಲಾಗಿದೆ. ಸದ್ಯ ಫರಹತಾಬಾದ್ ಪೊಲೀಸ್​ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ, ಪಿಐ ಮಂಜುನಾಥ ಇಕ್ಕಳಕಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Related Articles

Back to top button