
ಪ್ರಗತಿವಾಹಿನಿ ಸುದ್ದಿ; ಲಕ್ನೋ: ವ್ಯಕ್ತಿಯೊಬ್ಬ ತನ್ನ ಸೊಸೆಯ ಮೇಲೆಯೇ ಅತ್ಯಾಚಾರ ನಡೆಸಿದ್ದು, ಬಳಿಕ ಮಗನನ್ನೇ ಗುಂಡಿಟ್ಟು ಹತ್ಯೆಗೈದಿರುವ ಘೋರ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.
ವರ್ಷದ ಹಿಂದಷ್ಟೇ ವಿವಾಹವಾಗಿ ಬಂದಿದ್ದ ಸೊಸೆಯ ಮೇಲೆಯೇ ಕಣ್ಣುಹಾಕಿದ್ದ ಮಾವ, ಮನೆಯಲ್ಲಿ ಮಗ ಇಲ್ಲದಿರುವ ಸಂದರ್ಭದಲ್ಲಿ ಸೊಸೆ ಮೇಲೆ ಅತ್ಯಾಚಾರವೆಸಗಿದ್ದಾನೆ. ವಿಷಯ ತಿಳಿದ ಮಗ ತಂದೆಯ ಕೃತ್ಯದ ಬಗ್ಗೆ ಪ್ರಶ್ನಿಸಿದ್ದಾನೆ. ಅಪ್ಪ-ಮಗನ ನಡುವೆ ವಾಗ್ವಾದ ನಡೆದು ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಅಪ್ಪ ಲೈಸನ್ ಹೊಂದಿದ್ದ ರಿವಾಲ್ವರ್ ನಿಂದ ಗುಂಡುಹಾರಿಸಿ ಮಗನನ್ನೇ ಹತ್ಯೆಗೈದಿದ್ದಾನೆ.
ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 56 ವರ್ಷದ ಆರೋಪಿ ಹಾಗೂ ಆತನ ಕಿರಿ ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.