ಪ್ರಗತಿವಾಹಿನಿ ಸುದ್ದಿ: ತಾಳ್ಮೆ ಕಳೆದುಕೊಂಡ ಪಾಪಿ ತಂದೆಯೊಬ್ಬ ತನ್ನ ಮಗಳನ್ನು ಕುಕ್ಕರ್‌ನಿಂದ ಹಿಗ್ಗಾಮುಗ್ಗ ಥಳಿಸಿ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ ಬೆಳಕಿಗೆ ಬಂದಿದೆ.
ಮೃತ ದುರ್ದೈವಿಯನ್ನು ಹೇತಾಲಿ ಪರ್ಮಾರ್ (18) ಎಂದು ಗುರುತಿಸಲಾಗಿದೆ. ಈಕೆಯನ್ನು ತಂದೆ ಮುಖೇಶ್ ಪರ್ಮಾರ್ (40) ಕೊಲೆ ಮಾಡಿದ್ದಾನೆ. ಕುಟುಂಬಸ್ಥರೆಲ್ಲ ಹೊರಗೆ ಹೋಗಿದ್ದ ವೇಳೆ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಂತ್ರಸ್ತೆ ತಾಯಿ ಗೀತಾ ಮತ್ತು ಅಕ್ಕ ಕೆಲಸಕ್ಕೆ ಹೋಗಿದ್ದು, ಇಬ್ಬರು ಕಿರಿಯ ಸಹೋದರರು ಸಹ ಮನೆಯಲ್ಲಿ ಇರಲಿಲ್ಲ. ಆರೋಪಿ ಮುಕೇಶ್ ಸಂತ್ರಸ್ತೆಯ ಬಳಿ ತಾಯಿ ಹೇಳಿ ಹೋಗಿದ್ದ ಕೆಲಸಗಳನ್ನು ಪೂರ್ಣಗೊಳಿಸುವಂತೆ ಹೇಳಿದ್ದಾನೆ. ಈ ವೇಳೆ ಹೇತಾಲಿ ನಂತರ ಮಾಡುವುದಾಗಿ ಹೇಳಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು ಮುಖೇಶ್, ತನ್ನ ಮಗಳ ತಲೆ ಮತ್ತು ಮುಖಕ್ಕೆ ಕುಕ್ಕರ್‌ನಿಂದ ಹೊಡೆದಿದ್ದಾನೆ. ಪರಿಣಾಮ ಹೇತಾಲಿ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಕೆಯನ್ನು ಹತ್ತಿರದ ಸ್ಕಿಮರ್ ಆಸ್ಪತ್ರೆಗೆ ಕರೆದೊಯ್ಯಲಾಗೆ. ಬಳಿಕ ಆಕೆ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾಳೆ. ಪೊಲೀಸರ ಪ್ರಕಾರ, ಹೇತಾಲಿ ವಜ್ರದ ಘಟಕದಲ್ಲಿ ಕೆಲಸ ಮಾಡುತ್ತಿದ್ದಳು. ಕಂಪನಿಯವರು ರಜೆ ಘೋಷಿಸಿದ್ದರಿಂದ ಆಕೆ ಮನೆಯಲ್ಲಿದ್ದಳು. ಇನ್ನು ಹೇತಾಲಿ ತಾಯಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆಯ ಅಕ್ಕ ಲಾಜಿಸ್ಟಿಕ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಮುಖೇಶ್ ಬಾಡಿಗೆಗೆ ಆಟೋರಿಕ್ಷಾ ಓಡಿಸುತ್ತಿದ್ದು, ಅನಾರೋಗ್ಯದ ಕಾರಣ ಕಳೆದ ಎಂಟು ದಿನಗಳಿಂದ ಮನೆಯಲ್ಲೇ ಇದ್ದನು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ