Kannada NewsKarnataka NewsLatest
*ಮದುವೆಗೆ ಜಾತಕ ತೋರಿಸಲು ಹೋಗಿದ್ದ ಯುವತಿ ಮೇಲೆ ದೇವಸ್ಥಾನದ ಅರ್ಚಕನಿಂದ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಜಾತಕ ತೋರಿಸಲು ಹೋಗಿದ್ದ ಯುವತಿ ಮೇಲೆಯೇ ದೇವಸ್ಥಾನದ ಅರ್ಚಕ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
ಯುವತಿ ಮದುವೆಗಾಗಿ ಅರ್ಚಕರ ಬಳಿ ಜಾತಕ ತೋರಿಸಲು ಹೋಗಿದ್ದಳು. ಈ ವೇಳೆ ಅರ್ಚಕ ಜಾತಕದಲ್ಲಿ ದೋಷವಿದೆ. ಪರಿಹಾರ ಮಾಡಿಸಬೇಕು ಎಂದು ಹೇಳಿ ಹೆದರಿಸಿದ್ದಾನೆ. ಅಲ್ಲದೇ ದೋಷ ಪರಿಹಾರ ಹೇಳುವುದಾಗಿ ಕರೆದು ಪದೇ ಪದೇ ಅತ್ಯಾಚಾರವೆಸಗಿದ್ದಾಗಿ ಸಂತ್ರಸ್ತ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಬಣಕಲ್ ಪೊಲೀಸರು, ಆರೋಪಿ ಕೃಷ್ಣರಾವ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




