Kannada News

ಯಮಕನಮರಡಿ ಬಿಜೆಪಿ ಕಾರ್ಯಕರ್ತರಿಂದ ಸಂಸದ ಜೊಲ್ಲೆಗೆ ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಅಗಸಗಿ :

ಯಮಕನಮರಡಿ ಕ್ಷೇತ್ರದ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೋಲ್ಲೆಯವರಿಗೆ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿ, ಅಭಿನಂದಿಸಿದರು.

ಅಭಿನಂದನೆ ಸ್ವಿಕರಿಸಿ ಮಾತನಾಡಿದ ಸಂಸದ ಜೋಲ್ಲೆ, ಪ್ರಧಾನಿ ಮೋದಿಯವರಿಂದಾಗಿ ಇಂದು ದೇಶದಲ್ಲಿ ಅಭಿವೃದ್ಧಿಯ ಮಾತು ಕೇಳಿ ಬರುತ್ತಿವೆ. ಈ ಹಿಂದೆ ರಾಜಕೀಯ ಅಂದರೆ ಬರಿ ಜಾತಿ, ಹಣಬಲ ಮತ್ತು ತೋಳ್ಬಲ ಎನ್ನಲಾಗುತ್ತಿತ್ತು. ಆದರೆ ಈಗ ರಾಜಕೀಯ ಅಂದರೆ ಅಭಿವೃದ್ಧಿ ಎಂಬ ಭಾವನೆ ಜನರ ಮನದಲ್ಲಿ ಮೂಡಿದೆ. ಅದಕ್ಕಾಗಿ ಯಾವುದೇ ಸಮಸ್ಯೆ ಇದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ತುಂಬಿದರು.

ನನಗೆ ಅಧಿಕಾರಕ್ಕಿಂತ ಕಾಯಕವೇ ಮುಖ್ಯ. ಅದಕ್ಕಾಗಿ  ಕೆಲಸಕ್ಕೆ ನಾನು ಮೊದಲ ಆದ್ಯತೆ ನಿಡುತ್ತಾ ಬಂದಿದ್ದೇನೆ. ನಮಗೆ 2013 ರಿಂದ ಅಧಿಕಾರ ಸಿಕ್ಕಿದೆ. ಆದರೆ ನಾವು ಜನಸೇವೆ ಮಾಡಲು ಪ್ರಾರಂಭಿಸಿ 20 ವರ್ಷವಾಯಿತು ಎಂದು ಹೇಳಿದರು.

Home add -Advt

 ಮೋದಿಯವರು ಕೇವಲ ಕೆಲಸ ಮತ್ತು ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಾರೆ . ಇದರಿಂದ ನಮಗೆ ಕೆಲಸ ಮಾಡಲು ಇನ್ನಷ್ಟು ಹುಮ್ಮುಸ್ಸು ಬಂದಿದೆ. ಬರುವ 5 ವರ್ಷದಲ್ಲಿ ಚಿಕ್ಕೋಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆಂದರು.
ಈ ಸಂದರ್ಭದಲ್ಲಿ ಕುರಣಿ ಗ್ರಾಮದ ಅಡವಿಸಿದ್ದೇಶ್ವರ ಸಂಸ್ಥಾನಮಠ ಸ್ವಾಮಿಗಳಾದ
ಮಲ್ಲಿಕಾರ್ಜುನ ಸ್ವಾಮಿ , ಬಿಜೆಪಿ ಮುಖಂಡ ಹಾಗೂ ಮಾಜಿ ಉಸ್ತುವಾರಿ ಸಚಿವ 
ಶಶಿಕಾಂತ ನಾಯಿಕ, ಯಮಕನಮರಡಿ ಬಿಜೆಪಿ ಮುಖಂಡರಾದ ಮಾರುತಿ ಅಷ್ಟಗಿ ,
ಶಿವನಾಯಕ ನಾಯ್ಕರ, ಶಶಿಕಾಂತ ಮಠಮತಿ, ಪರ್ವತಗೌಡ ಪಾಟೀಲ ಅಗಸಗಿ, ಶುಶಾಂತ ಕಟಾಂಬಳೆ ಶಾಸ್ರ್ತಿ ಜಾಫರವಾಡಿ, ರವಿ ಹೀರೆಮಠ, ವಿರಣ್ಣಾ ಹಾಲದೇವರಮಠ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button