Latest

ಅನಾರೋಗ್ಯದಿಂದ ಹೆಣ್ಣು ಚಿರತೆ ಸಾವು

ಪ್ರಗತಿವಾಹಿನಿ ಸುದ್ದಿ, ಶಿರಸಿ: ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  ಹೆಣ್ಣು ಚಿರತೆಯೊಂದು‌ ಅಸಹಜವಾಗಿ ಮೃತಪಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕರ್ಜಗಿಯ ತೋಟವೊಂದರಲ್ಲಿ ಈ ಘಟನೆ ನಡೆದಿದೆ. ಸುಮಾರು ಐದಾರು ವರ್ಷ ಪ್ರಾಯದ‌ ಚಿರತೆ ಇದಾಗಿದ್ದು, ನೀರು‌ ಕುಡಿಯಲು ಊರ ಸಮೀಪದ ತೋಟಕ್ಕೆ ಬಂದಿತ್ತು ಎನ್ನಲಾಗಿದೆ. ಆದರೆ ಅನಾರೋಗ್ಯಕ್ಕೆ ತುತ್ತಾದ ಚಿರತೆ ನಡೆದಾಡಲೂ ಕಷ್ಟ ಪಡುವ ಸ್ಥಿತಿ ತಲುಪಿತ್ತು.

ಈ ಬಗ್ಗೆ ಪಶು ವೈದ್ಯರು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು  ಬಳಿಕ ನ್ಯಾಯಾಲಕ್ಕೆ ವರದಿ ಸಲ್ಲಿಸಿ , ಡಿಸಿಎಫ್ ಡಾ. ಅಜ್ಜಯ್ಯ ಜಿ‌.ಆರ್.,  ಎಸಿಫ್ ರಘು ಡಿ. ಅವರ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಈ‌‌ ಕುರಿತು ಶಿರಸಿ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://pragati.taskdun.com/lakshmi-hebbalkar-is-another-name-for-achievement-chalenge-and-party-loyalty-2/
https://pragati.taskdun.com/i-have-instructed-the-authorities-to-ensure-that-water-problem-does-not-arise-mla-shashikala-jolla/
https://pragati.taskdun.com/inauguration-of-lakshmidevi-new-temple-from-may-29/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button