ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ: ಉತ್ಸವಗಳು ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕಗಳಾಗಿದ್ದು, ಯಕ್ಸಂಬಾದ ಜೊಲ್ಲೆ ಗ್ರುಪ್ ಆಯೋಜಿಸುವ ಪ್ರೇರಣಾ ಉತ್ಸವ ಗಡಿಭಾಗದ ಜನರಲ್ಲಿ ಉತ್ಸಾಹ ಮೂಡಿಸುವ ಜೋತೆಗೆ ವಿಶೇಷಚೇತನ ಮಕ್ಕಳಿಗೆ ಪ್ರೇರಣೆ ನೀಡುವ ಉತ್ಸವವಾಗಿದೆ. ಸಹಕಾರ, ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತೀರುವ ಜೊಲ್ಲೆ ಪರಿವಾರದ ಕಾರ್ಯ ಸ್ಲಾಘನೀಯ ಎಂದು ಶ್ರೀಶೈಲ ಪೀಠದ ಶ್ರೀ ಡಾ. ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಅವರು ಶನಿವಾರ ಸಾಯಂಕಾಲ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾದ ಪ್ರೇರನಾ ಉತ್ಸವದ ಕೊನೆಯದಿನದಂದು ಪ್ರೇರಣಾ ಪುರಸ್ಕಾರ ವೀತರಣೆ ಸಮಾರಂಭ ಹಾಗೂ ಜ್ಯೋತಿಪ್ರಸಾದ ಜೊಲ್ಲೆ ನಾಗರೀಕ ಸನ್ಮಾನ ಸಮಾರಂಭದ ದಿವ್ಯಸಾನಿಧ್ಯವಹಿಸಿಕೊಂಡು ಮಾತನಾಡಿದರು.
ಮನುಷ್ಯ ಮಗುವಾಗಿ ಹುಟ್ಟಿದ ನಂತರ ಅವನು ಅಳುತ್ತಾನೆ ಹಾಗೂ ಜಗತ್ತು ಸಂತೋಷಪಡುತ್ತಿರುತ್ತದೆ. ಆದರೆ ಮನುಷ್ಯ ಸಾವಿನ ನಂತರ ಇಡೀ ಜಗತ್ತೇ ಅಳುವಂತೆ ಮಾಡಿ ಜಗತ್ತೇ ನೆನಪಿಸುವಂತ ಸಾಧನೆಯನ್ನು ನಾವು ಜೀವನದುದ್ದಕ್ಕೂ ಮಾಡಬೇಕೆಂದರು.
ನೇತೃತ್ವವಹಿಸಿಕೊಂಡಿದ್ದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು. ಅವರಿಗಾಗಿ ಭಾರತ ಹಾಗೂ ಕರ್ನಾಟಕದ ಘಟಕದಿಂದ ಸ್ಪೇಶಿಯಲ್ ಓಲಿಂಪಿಕ್ಸ್ ಆಯೋಜನೆ ಮಾಡಲಾಗುತ್ತಿದೆ. ಈ ವರ್ಷ ಜೊಲ್ಲೆ ಗ್ರುಪ್ ಸಂಸ್ಥೆ ರಾಜ್ಯದ ವಿವಿಧ ವಿಶೇಷಚೇತನ ಶಾಲಾ ಮಕ್ಕಳಿಗಾಗಿ ನೃತ್ಯೋತ್ಸವನ್ನು ಆಯೋಜನೆ ಮಾಡಿ ಇಂದು ಅವರಿಗೆ ನಗದು ಬಹುಮಾನ ನೀಡಲಾಗಿದೆ ಎಂದ ಅವರು ಈ ಸಮಾಜಮುಖಿ ಕಾರ್ಯಗಳಿಗೆ ನಮಗೆ ನಮ್ಮ ಹೀರಿಯ ಪುತ್ರ ಜ್ಯೋತಿಪ್ರಸಾದ ಅವರೇ ಪ್ರೇರಣೆಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಈ ವರ್ಷದ ಪ್ರೇರಣಾ ಪುರಸ್ಕಾರವನ್ನು ದೆಹಲಿಯ ವಿಶೇಷಚೇತನ ಸ್ಪೇಶಿಯಲ್ ಓಲಂಪಿಕ್ ಭಾರತದ ಬ್ರಾಂಡ್ ಅಂಬಾಸೀಡರ್ ಯಾಸಿಕಾ ಭಟ್ ಅವರಿಗೆ ನೀಡಿ ಗೌರವಿಸಲಾಯಿತು ಹಾಗೂ ಜೊಲ್ಲೆ ಗ್ರುಪ್‌ದಿಂದ ವಿಶೇಷಚೇತನ ಮಕ್ಕಳಿಗಾಗಿ ಆಯೋಜಿಸಲಾದ ನೃತ್ಯೋತ್ಸವ ಸ್ಪರ್ಧೆಯ ವಿಜೇತರಾದ ಮಂಡ್ಯದ ಪ್ರೇರಣಾ ಸ್ಪೇಶಲ್ ಶಾಲೆ, ಮೂಡಬಿದರೆಯ ಸ್ಪೂರ್ತಿ ಸ್ಪೇಶಲ್ ಶಾಲೆ, ಸಾಗರ ಚೈತ್ಯನ್ಯ ಶಾಲಾ ಮಕ್ಕಳಿಗೆ ಅನುಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶೇಗುಣಸಿ ವಿರಕ್ತಮಠದ ಶ್ರೀ ಡಾ ಮಹಾಂತಪ್ರಭು ಮಹಾಸ್ವಾಮೀಜಿ, ಬಾವನಸೌದತ್ತಿಯ ಮಾತೋಶ್ರೀ ಬ್ರಮರಾಂಬಿಕಾ ದೇವಿ ಸಾನಿಧ್ಯವಹಿಸಿಕೊಂಡಿದ್ದರು. ವೇದಿಕೆ ಮೇಲೆ ಮಾಜಿಸಂಸದ ಅಣ್ಣಾಸಾಹೇಬ ಜೊಲ್ಲೆ, ಯುವ ಧುರೀಣ ಬಸವಪ್ರಸಾದ ಜೊಲ್ಲೆ, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಗಣ್ಯರಾದ ರಾಜಕುಮಾರ ಪಾಟೀಲ, ಕೇದಾರಶಿಂಹ ಪಾಟೀಲ ಸೇರಿದಂತೆ ಜೊಲ್ಲೆ ಗ್ರುಪ್ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಾಲಾ ಕಾಲೇಜುಗಳು ಪ್ರಾಚಾರ್ಯರು, ಶಿಕ್ಷಕರು, ಪಾಲಕರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ