ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸರಕಾರ ಹಿಂದೇಟು ಹಾಕಿದರೆ ಡಿ.22ರಂದು ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಿ ವಿರಾಟ ಪಂಚಶಕ್ತಿ ಸಮಾವೇಶ ಹಮ್ಮಿಕೊಳ್ಳಲು ಬೆಳಗಾವಿಯ ಗಾಂಧಿಭವನದಲ್ಲಿ ನಡೆದ ಪಂಚಮಸಾಲಿ ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ, ಮೀಸಲಾತಿ ಕೊಟ್ಟರೆ ಸನ್ಮಾನ ಮಾಡೋಣ, ಕೊಡದಿದ್ದರೆ ಡಿ.22ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಮುಂದೆ ನಮ್ಮ 25 ಲಕ್ಷ ಪಂಚಮಸಾಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡೋಣ ಎಂದು ಕರೆ ನೀಡಿದರು.
ಪಕ್ಷದ ವಿರುದ್ಧ ನಾನು ಮಾತನಾಡಿದರೂ ನನ್ನ ವಿರುದ್ಧ ಕ್ರಮ ಆಗದೇ ಇರುವುದು ಬೆಂಗಳೂರಿನ ನಮ್ಮ ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನದ ಪರಿಣಾಮ ಎಂದರು.
ಪಕ್ಷದಿಂದ ನನ್ನ ಹೊರ ಹಾಕಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೀಸಲಾತಿ ಸಿಕ್ಕ ತಕ್ಷಣ ಶ್ರೀಗಳಿಗೆ ಕೂಡಲಸಂಗಮದಲ್ಲಿ ಮಠ ಕಟ್ಟಲು 1 ಕೋಟಿ ರೂಪಾಯಿ ಕೊಡುತ್ತೇನೆ ಎಂದು ಘೋಷಿಸಿದರು.
ಸಭೆಯ ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ಸುವರ್ಣ ವಿಧಾನಸೌಧದ ಮುಂದೆ ಮೀಸಲಾತಿಗೆ ಆಗ್ರಹಿಸಿ ಅಂತಿಮ ಹೋರಾಟ ನಡೆಯಲಿದೆ ಎಂದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಮೀಸಲಾತಿ ಹೋರಾಟದ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದೇವೆ. ಕೊನೆಯ ಘಳಿಗೆಯಲ್ಲಿ ಜಾಸ್ತಿ ಶ್ರಮ ಹಾಕಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರವನ್ನು ಸೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಡಿ.19ರೊಳಗೆ ನಮ್ಮ ಹೋರಾಟಕ್ಕೆ ಮಣಿದು ಮೀಸಲಾತಿ ಘೋಷಣೆ ಮಾಡುತ್ತಾರೆ ಎಂದು ನಾವು ವಿಶ್ವಾಸವಿಟ್ಟಿದ್ದೇವೆ. ಒಂದೊಮ್ಮೆ ಹಾಗಾಗದಿದ್ದಲ್ಲಿ 22ರಂದು ಸುವರ್ಣ ವಿಧಾನಸೌಧ ಮುತ್ತಿಗೆ ಖಚಿತ. ಈ ಬಾರಿ ನಮ್ಮ ಹೋರಾಟ ಸ್ವಾಮಿಗಳ ನೇತೃತ್ವದಲ್ಲಿ ಯಶಸ್ವಿಯಾಗೇ ಆಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ಎ.ಬಿ. ಪಾಟೀಲ, ಶಶಿಕಾಂತ ನಾಯಿಕ, ಶಾಸಕ ಡಾ. ವಿಶ್ವನಾಥ ಪಾಟೀಲ, ಆರ್.ಕೆ. ಪಾಟೀಲ, ರೋಹಿಣಿ ಪಾಟೀಲ ಇದ್ದರು. ಯುವ ಘಟಕದ ಜಿಲ್ಲಾಧ್ಯಕ್ಷ ಗುಂಡು ಪಾಟೀಲ ಸ್ವಾಗತಿಸಿದರು.
https://pragati.taskdun.com/r-ashokd-k-shivakumarvidhanasabha-election/
*ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೆ ಬೇಕಾಗಿದೆ; ಎಲ್ಲಾ ಸಿಎಂ ಅವರೇ ಇಟ್ಟುಕೊಳ್ಳಲಿ…*
https://pragati.taskdun.com/belagavibasana-gowdapatil-yatnalcabinet-extantionreaction/
*ಬಿಜೆಪಿಯನ್ನ ತೊರೆಯುವುದಾಗಿ ಘೋಷಿಸುತ್ತಲೇ ಹೊಸ ಬಾಂಬ್ ಸಿಡಿಸಿದ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್*
https://pragati.taskdun.com/sandesh-nagarajcongresssjoinmysore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ