ಅಪ್ರಾಪ್ತೆಯ ಮೇಲೆ ಅತ್ಯಾಚಾರ
ಪ್ರಗತಿವಾಹಿನಿ ಸುದ್ದಿ ಜೈಪುರ: ರಾಜಸ್ತಾನದ ಅಲ್ವಾರ್‌ನಲ್ಲಿ ಅಪ್ರಾಪ್ತ ವಿಕಲಚೇತನ ಬಾಲಕಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯನ್ನು ರಾಜಸ್ತಾನ ಸರ್ಕಾರ ಸಿಬಿಐಗೆ ವಹಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತಿತರ ಸಚಿವರು, ಅಧಿಕಾರಿಗಳು ಸಭೆ ನಡೆಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಭಾನುವಾರ ನಿರ್ಧರಿಸಿದರು.
ನಿರ್ಭಯಾ ಪ್ರಕರಣದಷ್ಟೇ ಕ್ರೌರ್ಯವಾಗಿರುವ ಈ ಅತ್ಯಾಚಾರ ಪ್ರಕರಣ ರಾಜಸ್ತಾನ ಮಾತ್ರವಲ್ಲದೇ ದೇಶವನ್ನೇ ತಲ್ಲಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಲಂಕಶವಾಗಿ ತನಿಖೆ ಮಾಡಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವ ಬದ್ಧತೆ ರಾಜಸ್ತಾನ ಸರ್ಕಾರದ್ದಾಗಿದೆ.
ಫ್ಲೈ ಓವರ್ ಕೆಳಗೆ ಎಸೆದ ದುರುಳರು
೧೬ ವರ್ಷದ ಮಾನಸಿಕ ಅಸ್ವಸ್ಥ ವಿಕಲ ಚೇತನ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಬಳಿಕ ಬಾಲಕಿಯನ್ನು ಫ್ಲೈ ಓವರ್ ಕೆಳೆಗೆ ಎಸೆದು ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ಬಾಲಕಿ ಬಿದ್ದಿದ್ದನ್ನು ಕಂಡು ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಆಕೆಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ. ಆದಾಗ್ಯೂ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿ ಮಾನಸಿಕವಾಗಿ ಅಸ್ವಸ್ಥಳಾಗಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ಕಲೆಹಾಕುವುದು ಸವಾಲಾಗಿದೆ. ಮನುಕುಲವೇ ನಾಚುವಂತ ಈ ಹೇಯ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಭಾನುವಾರ ಮಹತ್ವದ ಸಭೆ ನಡೆಸಿದ ರಾಜಸ್ತಾನ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ.
ಹೃದಯಾಘಾತದಿಂದ SSLC ವಿದ್ಯಾರ್ಥಿ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ