ಆರ್ಥಿಕ ವಿಶೇಷ ಪ್ಯಾಕೇಜ್ ನ 4ನೇ ಹಂತದ ವಿವರಣೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೋನಾ ಲಾಕ್‌ಡೌನ್ ಪರಿಸ್ಥಿತಿಗಳನ್ನು ನಿರ್ವಹಿಸಲೆಂದು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ನಾಲ್ಕನೇ ಕಂತಿನ ಬಗ್ಗೆ ವಿವರಣೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಚನಾತ್ಮಕ ಸುಧಾರಣೆ, ಸಾರ್ವಜನಿಕ ವಲಯದ ಬ್ಯಾಂಕ್, ಕೈಗಾರಿಕೆ ಅಭಿವೃದ್ಧಿಗಳ ಕುರಿತಾಗಿ ಆದ್ಯತೆ ನೀಡಿದ್ದಾಗಿ ತಿಳಿಸಿದರು.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ಇವತ್ತು ರಚನಾತ್ಮಕ ಸುಧಾರಣೆ ಕ್ರಮಗಳನ್ನ ಘೋಷಿಸುತ್ತೇವೆ. ಇವತ್ತಿನ ಸುಧಾರಣಾ ಕ್ರಮಗಳಿಂದ ಹೆಚ್ಚೆಚ್ಚು ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಹೆಚ್ಚು ಉತ್ಪನ್ನಗಳು ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಂದಿನ ಪ್ಯಾಕೇಜ್​ನಲ್ಲಿ ಕಲ್ಲಿದ್ದಲು, ಖನಿಜ, ರಕ್ಷಣಾ ವಲಯದ ಉತ್ಪಾದನೆ, ಏರ್​ಸ್ಪೇಸ್ ಮ್ಯಾನೇಜ್ಮೆಂಟ್, ಏರ್​ಪೋರ್ಟ್, ಎಂಆರ್​ಒ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿದ್ಯುತ್ ವಿತರಣೆ ಕಂಪನಿಗಳು, ಅಣು ವಿದ್ಯುತ್ ಈ 8 ವಲಯಗಳಲ್ಲಿ ಸುಧಾರಣಾ ಕ್ರಮಗಳಿಗೆ ಹೆಚ್ಚು ಗಮನ ಹರಿಸಲಾಗಿದೆ ಎಂದರು.

* ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸರ್ಕಾರಿ ನಿಯಂತ್ರಣವನ್ನು ತೆಗೆದುಹಾಕಲಾಗಿದೆ.
* ಖಾಸಗಿ ಕಂಪನಿಗಳಿಗೆ ರೆವೆನ್ಯೂ ಶೇರಿಂಗ್ ಆಧಾರದಲ್ಲಿ ಗಣಿಗಾರಿಕೆ ಕೊಡಲು ನಿರ್ಧಾರ
* 500 ಮೈನಿಂಗ್ ಬ್ಲಾಕ್​ಗಳ ಹಂಚಿಕೆ
* ಬಾಕ್ಸೈಟ್ ಮತ್ತು ಕೋಲ್ ಜಂಟಿ ಹರಾಜು ಪ್ರಕ್ರಿಯೆಗೆ ಅವಕಾಶ
* ಕ್ಯಾಪ್ಟಿವ್ ಮತ್ತು ನಾನ್ ಕ್ಯಾಪ್ಟಿವ್ ವರ್ಗೀಕರಣ ಇಲ್ಲ
* ಮಿಲಿಟರಿ ಉಪಕರಣಗಳ ಆಮದು ನಿಷೇಧ
* ಯುದ್ಧೋಪಕರಣಗಳ ಪಟ್ಟಿ ಪರಿಷ್ಕರಣೆ- ದೇಶೀಯ ಉತ್ಪಾದನೆಗೆ ಆದ್ಯತೆ
* ಹೈಟೆಕ್ ಉಪಕರಣ ಮಾತ್ರ ಆಮದು ಅವಕಾಶ
* ಉತ್ಪಾದನಾ ಘಟಕಗಳಾದ ಆರ್ಡಿನೆನ್ಸ್ ಫ್ಯಾಕ್ಟರಿಗಳ ನಿಗಮೀಕರಣ
* ರಕ್ಷಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಶೇ. 49ರಿಂದ 74%ಗೆ ಏರಿಕೆ
* ಏರ್​ಪೋರ್ಟ್ ಬಳಕೆಯಲ್ಲಿದ್ದ ನಿರ್ಬಂಧ ಸಡಿಲಿಕೆ
* 12 ಏರ್​ಪೋರ್ಟ್​ ಪಿಪಿಪಿ ಆಧಾರದ ಮೇಲೆ ಹರಾಜು
* ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button