ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಫೈನಾನ್ಸ್, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಜನರ ಜೀವವನ್ನೇ ಹಿಂದುತ್ತಿದೆ. ನೊಂದು ಜನರು ದಿನಕ್ಕೊಬ್ಬರಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಫೈನಾನ್ಸ್ ಕಿರುಕುಳದಿದ ಅವಮಾನಗೊಂಡು, ನೊಂದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಯಮಲಾಪುರದಲ್ಲಿ ನಡೆದಿದೆ.
ಸರೋಜಾ ಕಿರಬಿ (52) ಆತ್ಮಹತ್ಯೆಗೆ ಶರಣಾದ ಮಹಿಳೆ. ಹುಕ್ಕೇರಿ ತಾಲೂಕಿನ ಶಿರೂರು ಮೂಲದ ಸರೋಜಾ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದರು. ಅರ್ಧ ಸಾಲ ಹಿಂತಿರುಗಿಸಿದ್ದರೂ ಕಂಪನಿಯವರು ಒಟ್ಟಿಗೆ ಒಂದೇ ಬಾರಿ ಸಾಲ ಮರುಪಾವತಿ ಮಡಬೇಕು ಎಂದು ಸೂಚಿಸಿದ್ದರು. ಅಲ್ಲದೇ ಕಿರುಕುಳ ನೀಡುವುದು ಅವಮಾನ ಮಾಡುವುದು ಮಾಡುತ್ತಿದ್ದರು. ಇದರಿಂದ ನೊಂದ ಮಹಿಳೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ