


ಗ್ರಾಮೀಣ ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ಹಾಗೂ ಕೆಲವೆಡೆ ವಯಕ್ತಿಕವಾಗಿ ಕೂಡ ಲಕ್ಷ್ಮಿ ಹೆಬ್ಬಾಳಕರ್ ನೆರವು ನೀಡುತ್ತಿದ್ದಾರೆ. ಶ್ರೀ ಬೀರದೇವರ ದೇವಸ್ಥಾನಕ್ಕೆ 6.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 3.50 ಲಕ್ಷ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ 3.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 1.95 ಲಕ್ಷ ರೂ,ಗಳ ಚೆಕ್ ಗಳನ್ನು ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಶ ದೇಸಾಯಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು, ಆಯಾ ದೇವಸ್ಥಾನಗಳ ಕಮೀಟಿಯವರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ