ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಾಳೆ, ಭಾನುವಾರ ಹೊರಗಡೆ ಏನಾದರೂ ಕೆಲಗಳಿದ್ದರೆ ಇಂದೇ ಮುಗಿಸಿಕೊಳ್ಳಿ. ನಾಳೆ ಮನೆಯಿಂದ ಹೊರಬೀಳುವಂತಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಇಂದು ರಾತ್ರಿ 7 ಗಂಟೆಯಿಂದ 36 ಗಂಟೆಗಳ ರಾಜ್ಯದಲ್ಲಿ ಕರ್ಫ್ಯೂ ಇರಲಿದೆ.
ರಾಜ್ಯದಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಜೊತೆಗೆ ಪ್ರತಿ ಭಾನುವಾರ ಕೂಡ ಕರ್ಫ್ಯೂ ಇರಲಿದೆ. ಹಾಗಾಗಿ ಇಂದು ಸಂಜೆ 7 ಗಂಟೆಗೆ ಆರಂಭವಾಗಲಿರುವ ಕರ್ಫ್ಯೂ ಸೋಮವಾರ ಬೆಳಗ್ಗೆ 7 ಗಂಟೆಗೆ ಮುಕ್ತಾಯವಾಗಲಿದೆ.
ಆಸ್ಪತ್ರೆ, ಮೆಡಿಕಲ್ಸ್, ಹಾಲು ಸೇವೆಗಳು ಮಾತ್ರ ಇರಲಿದ್ದು, ಇತರ ಯಾವುದೇ ಸೇವೆಗಳು ಇರುವುದಿಲ್ಲ . ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಸಂಚಾರ, ಜನ ಸಂಚಾರ, ಕಿರಾಣಿ , ಕಾಯಿಪಲ್ಲೆ ಸಹಿತ ಎಲ್ಲ ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ಎಲ್ಲಾ ಚಟವಟಿಕೆಗಳು ಇರುವುದಿಲ್ಲ.
ಈಗಾಗಲೇ ನಿಗದಿಪಡಿಸಲಾದ ಮದುವೆ ಕಾರ್ಯಕ್ರಮಗಳನ್ನು ಸೂಕ್ತ ಪ್ರಾಧಿಕಾರದ ಅನುಮತಿಯೊಂದಿಗೆ ನಡೆಸಲು ಅನುಮತಿ ಇದೆ.
ಹಾಗಾಗಿ ನಾಳೆ ಅನಗತ್ಯವಾಗಿ ಹೊರಗೆ ಬರುವ ಪ್ರಯತ್ನ ಮಾಡಬೇಡಿ, ಏನಿದ್ದರೂ ಇಂದೇ ಪೂರ್ಣಗೊಳಿಸಿಕೊಳ್ಳಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ