Kannada NewsKarnataka NewsLatest

ಆಯೋಜಕರ ವಿರುದ್ಧ FIR : ವಿಡೀಯೋ ಪರಿಶೀಲಿಸಿ ಮುಂದಿನ ಕ್ರಮ ಎಂದು ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಾಮಾಜಿಕ ಜಾಲತಾಣದಲ್ಲಿ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಚವಾಟ ಗಲ್ಲಿಯಲ್ಲಿ ನಡೆದ ಎಮ್ಮೆಗಳ ಓಟದ ಸ್ಪರ್ಧೆ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಎಫ್ಐಆರ್ ಜಾಖಲಾಗಿದೆ. ವಿಡೀಯೋ ಪರಿಶೀಲಿಸಲಾಗುತ್ತಿದೆ. ಅದನ್ನು ನೋಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಶಾಸಕ ಅನಿಲ ಬೆನಕೆ ಕಾರ್ಯಕ್ರಮ ಉದ್ಘಾಟಿಸಿದ್ದು, ಅವರೂ ಯಾವುದೇ ಮಾರ್ಸೂಚಿ ಪಾಲಿಸಿಲ್ಲ. ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಕೇಳಿಬರುತ್ತಿದೆ. ಈ ಕುರಿತು ಪ್ರಗತಿವಾಹಿನಿ ವರದಿ ಪ್ರಕಟಿಸಿದೆ.  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಒತ್ತಡ: ಶಾಸಕ ಅನಿಲ ಬೆನಕೆ ವಿರುದ್ಧ ದಾಖಲಾಗುತ್ತಾ FIR?

Related Articles

Back to top button