Kannada NewsKarnataka NewsLatest
ಬೆಳಗಾವಿ: ಶಾರ್ಟ್ ಸರ್ಕ್ಯೂಟ್, ಸಿಲೀಂಡರ್ ಸ್ಪೋಟ, ಅಗ್ನಿ ಅನಾಹುತ

ಪ್ರಗತಿವಾಹಿನಿ ಸುದ್ದಿ ಬೆಳಗಾವಿ – ನಗರದ ಚವ್ಹಾಟ್ ಗಲ್ಲಿಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಒಂದೂವರೆ ಲಕ್ಷ ರೂ. ಗೂ ಹೆಚ್ಚಿನ ಮೊತ್ತದ ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.
ಚವ್ಹಾಟ್ ಗಲ್ಲಿಯ ಶಹಾಪುರಕರ್ ಎಂಬುವವರ ಮನೆಯಲ್ಲಿ ಮೊದಲು ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿ ಗ್ಯಾಸ್ ಸಿಲೀಂಡರ್ ಗೆ ತಗುಲಿ ಸಿಲಿಂಡರ್ ಸಹ ಸ್ಪೋಟಗೊಂಡಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು ಬೆಂಕಿ ನಂದಿಸುವ ಮತ್ತು ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಕಿ ಸಂಪೂರ್ಣ ಆರಿದ ಬಳಿಕವೇ ನಷ್ಟದ ಪ್ರಮಾಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




