*ವಿದ್ಯುತ್ ಅವಘಡದಲ್ಲಿ ಕಬ್ಬು ಬೆಳೆ ಬೆಂಕಿಗಾಹುತಿ: ತಿಂಗಳೊಳಗೆ ರೈತರಿಗೆ ಪರಿಹಾರ ನೀಡುವಂತೆ ಹೆಸ್ಕಾಂಗೆ ಕೋರ್ಟ್ ಆದೇಶ*
ಪ್ರಗತಿವಾಹಿನಿ ಸುದ್ದಿ: ಹೆಸ್ಕಾಂ ಬೇಜವಾಬ್ದಾರಿಗೆ ವಿದ್ಯುತ್ ಅವಘಡದಿಂದಾಗಿ ಕಬ್ಬು ಬೆಳೆಗೆ ಬೆಂಕಿ ತಗುಲಿ ಕಬ್ಬು ಬೆಳೆ ನಾಶವಾಗಿದ್ದ ಪ್ರಕರಣ ಸಂಬಂಧ ರೈತರಿಗೆ ತಿಂಗಳೊಳಗೆ ಪರಿಹಾರ ನೀಡುವಂತೆ ಬೈಲಹೊಂಗಲ ಕೋರ್ಟ್ ಆದೇಶ ನೀಡಿದೆ.
ಸಮೀಪದ ಹೊಸೂರ ಗ್ರಾಮದ ರೈತ ಮಡಿವಾಳಪ್ಪ ಹೊಂಗಲ ಅವರ 2ಏಕರೆ 31ಗುಂಟೆ ಹಾಗೂ ಅಡಿವೆಪ್ಪ ಕರಡಿಗುದ್ದಿ ಅವರ 2ಏಕರೆ32 ಗುಂಟೆ ಜಮೀನಿನಲ್ಲಿ ಬೆಳದಿದ್ದ ಕಬ್ಬು ಬೆಳೆಗೆ 3ಫೇ 2022ರಂದು ವಿದ್ಯುತ್ ಅವಘಡದಿಂದ ಸುಮಾರು 400ಟನ್ ಕಬ್ಬು ಬೆಳೆ ಸುಟ್ಟು ಕರಕಲಾಗಿತ್ತು. ಈ ಬಗ್ಗೆ ಪರಿಹಾರ ಕೇಳಿ ಬೈಲಹೊಂಗಲ ನ್ಯಾಯಲಯದಲ್ಲಿ ರೈತರು ಹೆಸ್ಕಾಂ ವಿರುದ್ದ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಆಲಿಸಿದ ನ್ಯಾಯಾಲಯ ಇಬ್ಬರು ರೈತರಿಗೆ 5 ಲಕ್ಷ 40ಸಾವಿರ ರೂಪಾಯಿಯಂತೆ ಒಟ್ಟು 10ಲಕ್ಷ 80 ಸಾವಿರ ರೂಪಾಯಿ ಪರಿಹಾರ ಧನ 30ದಿನದೊಳಗೆ ಶೇ6 ರಂತೆ ಬಡ್ಡಿ ಹಾಕಿ ಪರಿಹಾರ ವಿತರಿಸುವಂತೆ ಹೆಸ್ಕಾಂ ಇಲಾಖೆಗೆ ಬೈಲಹೊಂಗಲ ಹಿರಿಯ ಶ್ರೇಣಿ ನ್ಯಾಯಾಧೀಶರು ಆದೇಶಮಾಡಿದ್ದಾರೆ.
ರೈತರ ಪರವಾಗಿ ನ್ಯಾಯವಾದಿ ಎಮ್.ಎಸ್. ಅಂದಾನಶೆಟ್ಟಿ ಮತ್ತು ಎಫ್.ಎಸ್.ಸಿದ್ದನಗೌಡರ ವಾದ ಮಂಡನೆ ಮಾಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ