ಪ್ರಗತಿವಾಹಿನಿ ಸುದ್ದಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿ ಬೆಂಕಿ ದುರಂತ ಸಂಭವಿಸಿ 7 ತಿಂಗಳ ಮಗು ಸೇರಿ ನಾಲ್ವರು ಸಜೀವದಹನಗೊಂಡಿರುವ ಘಟನೆ ಗುಜರಾತ್ ನ ದ್ವಾರಕಾದಲ್ಲಿ ನಡೆದಿದೆ.
ಬೆಳಗಿನಜಾವ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಪತಿ, ಪತ್ನಿ, ಮಗು ಹಾಗೂ ಅಜ್ಜಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ಪವನ್ ಕಮಲೇಶ್ ಉಪಾಧ್ಯಾಯ, ಭಾವನಾ ಉಪಾಧ್ಯಾಯ, 7 ತಿಂಗಳ ಮಗು ಧನ್ಯಾ ಹಾಗೂ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ