ಪ್ರಗತಿವಾಹಿನಿ ಸುದ್ದಿ; ಮಾಸ್ಕೋ: ವೃದ್ಧಾಶ್ರಮದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 11 ಜನರು ಸಜೀವ ದಹನಗೊಂಡಿರುವ ಘಟನೆ ರಷ್ಯಾದ ಇಶ್ಬುಲ್ಡಿನೊ ಗ್ರಾಮದಲ್ಲಿ ನಡೆದಿದೆ.
ಇಂದು ಮುಂಜಾನೆ 3ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ವೃದ್ಧಾಶ್ರಮದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಿದ್ದೆಯಲ್ಲಿದ್ದ ವೃದ್ಧರು ಆಶ್ರಮದಿಂದ ಹೊರಬರಲಾಗದೇ ಸಜೀವ ದಹನಗೊಂಡಿದ್ದಾರೆ.
ನಾಲ್ವರು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡು ಹೊರಗೋಡಿಬಂದಿದ್ದಾರೆ. ಸಧ್ಯ ಬೆಂಕಿಯನ್ನು ನಂದಿಸಲಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




