Kannada NewsKarnataka NewsNationalWorld

*ಸಬ್ ಮರೀನ್ ಗೆ ಡಿಕ್ಕಿ ಹೊಡೆದ ಮೀನುಗಾರರ ಬೋಟ್: ಇಬ್ಬರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಗೋವಾ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಸಬ್ ಮರೀನ್ ನೌಕೆಗೆ ಮೀನುಗಾರರ ಬೋಟ್ ವೊಂದು ಡಿಕ್ಕಿ ಹೊಡೆದ ಪರಿಣಾಮ 2 ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಮೀನುಗಾರರ ಬೋಟ್ ನೌಕಾಪಡೆಯ ಸಬ್ ಮರೀನ್ ನೌಕೆಗೆ ಡಿಕ್ಕಿ ಹೋಡೆಯುತ್ತಿದ್ದಂತೆ ಬೋಟ್ ನಲ್ಲಿದ್ದ 13 ಜನರ ಪೈಕಿ 11 ಜನರನ್ನು ನೌಕಾಪಡೆಯ ಸಿಬ್ಬಂದಿಗಳು ರಕ್ಷಿಸಿದ್ದು, ಇಬ್ಬರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

Home add -Advt

ಸದ್ಯ ನೌಕಾಪಡೆ ಮೀನುಗಾರರು ಬೋಟ್ ನಿಂದ ಬಿದ್ದ ಸ್ಥಳದಿಂದ ಸುಮಾರು 200 ಮೀಟರ್ ನಷ್ಟು ದೂರದಷ್ಟು ಹುಡುಕಾಟ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Related Articles

Back to top button