Kannada NewsKarnataka News

ತಿನೈಕರ್ ಮೇಲೆ ಹಲ್ಲೆ: 9 ಜನರ ಬಂಧನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜಯಂತ ತಿನೈಕರ್ ಮೇಲೆ ಕಳೆದ ಮಾ.4ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಒಟ್ಟು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಪಟ್ಟಣದ ಹೊಟೇಲ್ ಉದ್ಯಮಿ ಲಕ್ಷ್ಮಣ ಶೆಟ್ಟಿ, ಚೌರಾಶಿ ಗಲ್ಲಿ ನಿವಾಸಿ ಲೋಕೇಶ ಕಲಬುರ್ಗಿ, ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನಗರದ ಗಂಗಪ್ಪ ಗುಜನಾಳ ಮತ್ತು ಭರಮಾ ದಾಸನಟ್ಟಿ, ಉದ್ಯಮಬಾಗ್ ನಿವಾಸಿಗಳಾದ ಸುನೀಲ ದಿವಟಗಿ, ಸಚೀನ ಯರಝರವಿ, ಅಖಿಲೇಶ ಯಾದವ, ಮಂಜುನಾಥ ಹೊಸಮನಿ, ಅನಗೋಳ ನಿವಾಸಿ ಈಶ್ವರ ಹುಬ್ಬಳ್ಳಿ ಬಂಧಿತರು.
ಬಂಧಿತರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Articles

Back to top button