Belagavi NewsBelgaum NewsKannada NewsKarnataka NewsNationalPolitics

*ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಮೇಲೆ ಫೋಕ್ಸೋ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಜನಪದ ಗಾಯಕ  ಮ್ಯೂಸಿಕ್ ಮೈಲಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಫೋಕ್ಸೋ ಕೇಸ್ ದಾಖಲಾಗಿದೆ. 

ಅ.24ರಂದು ಬಾಲಗಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮ್ಯೂಸಿಕ್ ಮೈಲಾರಿ, ಅಥಣಿ ಶಂಕರ, ಧಾನವಿ ಸಿಂಗರ್ ಅವರು ಬಾಲಕಿಯನ್ನು ಕರೆದೊಯ್ದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಲಾಡ್ಜ್‌ನಲ್ಲಿ ಉಳಿದುಕೊಂಡು ಮ್ಯೂಸಿಕ್ ಮೈಲಾರಿಯೊಂದಿಗೆ ಸಹಕರಿಸುವಂತೆ ಧಾನವಿ ಸಿಂಗರ್ ಬಾಲಕಿಗೆ ಒತ್ತಾಯಿಸಿದ್ದನು ತಿರಸ್ಕರಿಸಿದ ಬಾಲಕಿ ಮೇಲೆ ಅಥಣಿ ಶಂಕರ ಹಲ್ಲೆ ಮಾಡಿದ್ದಾನೆ. ಮೈಲಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಬಾಲಕಿ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು ಸದ್ಯ ಬಾಲಕಿ ರಕ್ಷಣೆ ಮಾಡಲಾಗಿದೆ.

Home add -Advt

Related Articles

Back to top button