Karnataka NewsLatestPolitics

*ಬಡವರಿಗೆ ನೇರವಾಗಿ ಸಂಪರ್ಕ ಇರುವ ಆಹಾರ ಇಲಾಖೆ – 6 ತಿಂಗಳಲ್ಲಿ ಹೊಸ ಬದಲಾವಣೆಗೆ ಬದ್ದ: ಸಚಿವ ರಿಜ್ವಾನ್ ಅರ್ಷದ್*

ಪ್ರಗತಿವಾಹಿನಿ ಸುದ್ದಿ: ಆಹಾರ ನಿಗಮ ಮಹತ್ವದ ನಿಗಮ ಬಡವರ ಆಹಾರಕ್ಕೆ ಸಂಬಂಧಿಸಿದಂತಹ ನಿಗಮ. ಈ ಇಲಾಖೆಯಲ್ಲಿ ಹೊಸ ಬದಲಾವಣೆಗೆ ಬದ್ದವಾಗಿದ್ದು, ಮುಂದಿನ 6 ತಿಂಗಳಲ್ಲಿ ಹೊಸ ರೂಪ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ಹೇಳಿದರು.

Home add -Advt

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನೂತನವಾಗಿ ನೇಮಕಗೊಂಡಿರುವ ಪ್ರಶಿಕ್ಷಣಾರ್ಥಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಶುಭಕೋರಿ, ಮಾತನಾಡಿದರು.

ಪ್ರಶಿಕ್ಷಣಾರ್ಥಿಗಳ ಉದ್ದೇಶಿಸಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್ ಅವರು, ನೀವು ಹೊಸದಾಗಿ ಆಯ್ಕೆ ಆಗಿದ್ದೀರಿ. ನಿಮ್ಮ ಹಾಗೇ ನಾನು ಹೊಸದಾಗಿಯೇ ಸಚಿನಾಗಿದ್ದೇನೆ. ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುವ ಉದ್ದೇಶದಿಂದಲೇ ಈ ಜವಾಬ್ದಾರಿ ಒಪ್ಕೊಂಡಿರೋದು. ಹೊಸ ಬದಲಾವಣೆ ತರಬೇಕಾದ್ರೇ ಹೊಸಬರು ಬರಬೇಕಾಗುತ್ತದೆ. ಬಡವರ ಆಹಾರಕ್ಕೆ ಸಂಬಂಧಿಸಿದ ಇಲಾಖೆ. ನೇರವಾಗಿ ಬಡವರೊಂದಿಗೆ ಕೆಲಸ ಮಾಡುವ ಸಂಸ್ಥೆಗೆ ಆಯ್ಕೆ ಆಗಿದ್ದೀರಿ. ಇತರೆ ಸರ್ಕಾರಿ ನೌಕರರಿಗಿಂತ 10 ಪಟ್ಟು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಕರೆ ನೀಡಿದರು.

ಇಲಾಖೆಯ ಗೋದಾಮುಗಳಲ್ಲಿ ಸಿಸಿಟಿವಿಗಳಿಲ್ಲ, ಆಹಾರ ಸಾಮಾಗ್ರಿಗಳ ಸರಬರಾಜು ಮಾಡುವ ವಾಹನಗಳಿಗೆ GPS ಇಲ್ಲ. ಅವೆಲ್ಲದರ ಸುಧಾರಣೆ ಮಾಡಲಾಗುತ್ತದೆ. ನಾವು ನೀವು ಎಲ್ಲರೂ ಸೇರಿ ಕೆಲಸ ಮಾಡಬೇಕು. ಜನರಿಗೆ ಕಾಣಿಸುವ ರೀತಿಯಲ್ಲಿ ಬದಲಾವಣೆ ತರಬೇಕು. ಆ ನಿಟ್ಟಿನಲ್ಲೇ ನೀವಹ ಕೆಲಸ ಮಾಡಬೇಕು. ನಮ್ಮ ಉದ್ದೇಶ ಸರಿಯಾಗಿದ್ರೇ ಇಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋದಕ್ಕೆ ಸಾಧ್ಯವಾಗುತ್ತದೆ. ಮಧ್ಯಾಹ್ನದ ಬಿಸಿಯೂಟದ ಯೋಜನೆ ನಮ್ಮಿಂದ ತೆಗೆದ್ದದ್ದು ಯಾಕೆ. ನಾವು ಸರಿಯಿದ್ರೇ ಯಾಕೆ ತೇಗಿತಿದ್ರು. ನಾವು ಸರಿಮಾಡ್ತೇವೆ ಎಂಬ ವಿಶ್ವಾಸ ಕೊಟ್ರೇ ಬೇಕಾದಷ್ಟು ಯೋಜನೆಗಳು ಬರುತ್ತವೆ. ಬಿಸಿಯೂಟದ ಯೋಜನೆ ಇಲಾಖೆಗೆ ವಾಪಸ್ ತರಲು ಪ್ರಯತ್ನ ಮಾಡ್ತೇನೆ. ಯಾವೊತ್ತೋ ಬದಲಾವಣೆ ಆಗುತ್ತೆ ಅಂತಾ ಕಾಯೋದಲ್ಲಾ.. ಇವತ್ತು ಬದಲಾವಣೆ ಆಗಬೇಕು. ಜೀವನ ನಡೆಸೋಕು ಕಷ್ಟ ಇರೋರ ಜೊತೆ ನಾವು ಕೆಲಸ ಮಾಡ್ತಿರೋದು. ಬಡವರಿಗೆ ಸೇವೆ ಮಾಡೋದಕ್ಕೆ ಅವಕಾಶ. ಅದಕ್ಕಾಗಿಯೇ ಮುಖ್ಯಮಂತ್ರಿಗಳು ಕೇಳಿದಾಗ ಇದೊಂದು ಸುವರ್ಣಾವಕಾಶ ಎಂದು ಒಪ್ಪಿಕೊಂಡಿದ್ದೇನೆ ಎಂದು ಸಚಿವ ರಿಜ್ವಾನ್ ಅರ್ಷದ್ ಅವರು ಹೇಳಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ 386 ಹುದ್ದೆಗಳಿಗೆ ಆಯ್ಕೆ ನಡೆದಿದ್ದು, ಜುಲೈ 17 ರಂದು ನೇಮಕ ಪತ್ರ ನೀಡಲಾಗಿದೆ. 191 ಅಭ್ಯರ್ಥಿಗಳು ವರದಿ ಮಾಡಿಕೊಂಡಿದ್ದಾರೆ. ಹೊಸದಾಗಿ ಆಯ್ಕೆಗೊಂಡಿರುವ ಪ್ರಶಿಕ್ಷಣಾರ್ಥಿಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ.

Related Articles

Back to top button