Kannada NewsKarnataka NewsLatest

ವಿಮಲ್ ಫೌಂಡೇಶನ್ ನಿಂದ ಆಹಾರ ಸಾಮಗ್ರಿ ಪೊಟ್ಟಣ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ವೈರಸ್ ಪರಿಣಾಮವಾಗಿ ಬೆಳಗಾವಿ ನಗರ ಲಾಕ್ ಡೌನ್ ಆಗಿದ್ದರಿಂದ ಸಂಕಷ್ಟದಲ್ಲಿರುವವರಿಗೆ ವಿವಿಧ ದಾನಿಗಳು ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಶುಕ್ರವಾರ ವಿಮಲ್ ಫೌಂಡೇಶನ್ ನಿಂದ ನಗರದ ಶಹಾಪುರದ ಶಾಸ್ತ್ರಿ ನಗರದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ವಿಮಲ್ ಫೌಂಡೇಶನ್ ಅಧ್ಯಕ್ಷ ಕಿರಣ ಜಾಧವ ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ವಿತರಿಸಿದರು.

Home add -Advt

ಶಾಸ್ತ್ರಿ ನಗರ ಹಾಗು ಸುತ್ತಲಿನ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಪಡೆದುಕೊಂಡರು.

ಶಾಸಕ ಅನಿಲ ಬೆನಕೆ, ಶ್ರೀನಿವಾಸ ಬಿಸನಕೊಪ್ಪ, ಹಂಗರಗಿಕರ್, ಬಾಲಾಜಿ ಜೋಶಿ, ಅಮರ ದೇಸಾಯಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

Related Articles

Back to top button