
ಪ್ರಗತಿವಾಹಿನಿ ಸುದ್ದಿ: ಮಂಡ್ಯ: ಹೋಳಿ ಹಬ್ಬದ ಸಂಭ್ರಮದಲ್ಲಿ ಉದ್ಯಮಿ ಊರ ಜನರಿಗೆ ಊಟ ನೀಡಿ, ಉಳಿದ ಊಟವನ್ನು ಅನಾಥಶ್ರಮದ ಮಕ್ಕಳಿಗೆ ಹಂಚಿದ್ದರು. ಆ ಊಟ ಸೇವಿಸಿದ್ದ ಅನಾಥಾಶ್ರದ ಮಕ್ಕಳು ಪುಡ್ ಪಾಯಿಸನ್ ನಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ.
ಟಿ.ಕಾಗೇಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 6ನೇ ತರಗತಿ ವಿದ್ಯಾರ್ಥಿ ಕೇರ್ಲಾಂಗ್ (13) ಫುಡ್ ಪಾಯ್ಸನ್ ನಿಂದ ಮೃತ ಪಟ್ಟಿದ್ದಾನೆ. ಅನಾಥಾಶ್ರಮದ ಹಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಮಕ್ಕಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಊಟ ಸೇವಿಸಿದ್ದ ಇತರ ಜನರು ಕೂಡ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.