Latest

ಕೊನೆಯ ಕಾರು ಮಾರಾಟ ಮಾಡಿ ಉತ್ಪಾದನೆ ಮುಗಿಸಿದ ಫೋರ್ಡ್ ಕಂಪನಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಪ್ರತಿಷ್ಠಿತ ಆಟೋಮೊಬೈಲ್ ಕಂಪನಿ ಫೋರ್ಡ್ ತನ್ನ ಕೊನೆಯ ಕಾರನ್ನು ಮಾರಾಟ ಮಾಡಿದೆ.

ತಮಿಳುನಾಡಿನ ತನ್ನ ಕಾರು ಉತ್ಪಾದನಾ ಘಟಕದಲ್ಲಿ ಎಕೋ ಸ್ಪೋರ್ಟ್ ಕಾರನ್ನು ಅದು ಗ್ರಾಹಕರಿಗೆ ನೀಡುವ ಮೂಲಕ ಅಧಿಕೃತವಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ.

ಭಾರೀ ನಷ್ಟದ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಫೋರ್ಡ್ ಕಂಪನಿ ಕಳೆದ ವರ್ಷ ಘೋಷಿಸಿತ್ತು.

ಕೊನೆಯ ಉತ್ಪಾದನೆ ಮಾರಾಟದ ವೇಳೆ ಹೂವುಗಳಿಂದ ಅಲಂಕರಿಸಿದ ಕಾರಿನ ಸಮ್ಮುಖದಲ್ಲಿ ನಿಂತು ಕಂಪನಿ ನೌಕರರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

Home add -Advt

ಯಡಿಯೂರಪ್ಪ ನಿವೃತ್ತಿ: CM ಬೊಮ್ಮಾಯಿ ಮೊದಲ ಪ್ರತಿಕ್ರಿಯೆ

https://pragati.taskdun.com/film-and-entertainment/priyanka-choprasellsher-rolls-royce-ghost-carsalebengaluru-based-businessman/

Related Articles

Back to top button