
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರ ಮಂಗಳವಾರ ಇನ್ನೂ ಎರಡು ಹೊಸ ಸಮಿತಿಗಳನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.
ಪ್ರಸ್ತುತ ತನಿಖೆಯ ಹಂತದಲ್ಲಿರುವ ವಿವಿದ ಹಗರಣಗಳ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಹಿರಿಯ ಸಚಿವರುಗಳಾದ ಎಚ್.ಕೆ.ಪಾಟೀಲ, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ ಲಾಡ್ ಸಮಿತಿಯ ಸದಸ್ಯರು.
ವಾರ್ತಾ ಇಲಾಖೆಯ ಜಾಹಿರಾತು ಪರಿಶೀಲನಾ ಸಮಿತಿಯೊಂದನ್ನು ರಚಿಸಲಾಗಿದ್ದು, ರಮೇಶ ಬಾಬು ಇದರ ಅಧ್ಯಕ್ಷರಾಗಿದ್ದಾರೆ. ಎಂ.ರಾಮಚಂದ್ರಪ್ಪ, ನಹೀದ್ ಅತಾವುಲ್ಲಾ ಸಮಿತಿಯ ಸದ್ಯರಾಗಿದ್ದು, ವಾರ್ತಾ ಇಲಾಖೆಯ ಆಯುಕ್ತರು ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ