
ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ಶಿಕ್ಷೆ ಜಾರಿಯಾಗಿದೆ.
ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ ಈ ತೀರ್ಪು ನೀಡಲಾಗಿದೆ. 2024 ರ ಅಕ್ಟೋಬರ್‌ನಲ್ಲಿ ಶಕೀಲ್ ಅಕಂದ್ ಬುಲ್ಬುಲ್ ಜೊತೆ ಸಂಭಾಷಣೆ ನಡೆಸಿದ್ದರು ಎನ್ನಲಾದ ಫೋನ್ ಕರೆ ಸೋರಿಕೆಯಾಗಿತ್ತು. ಸೋರಿಕೆಯಾದ ಆಡಿಯೋದಲ್ಲಿ ಹಸೀನಾ ಎಂದು ಹೆಸರಿಸಲಾದ ಮಹಿಳೆಯೊಬ್ಬರು ಮಾತನಾಡಿರುವ ಧ್ವನಿ ಇದ್ದು ಅದರಲ್ಲಿ ನನ್ನ ವಿರುದ್ಧ 227 ಪ್ರಕರಣಗಳು ದಾಖಲಾಗಿವೆ, ಆದ್ದರಿಂದ ನಾನು ಆ 227 ಜನರನ್ನು ಕೊಲ್ಲಲು ಪರವಾನಗಿ ಪಡೆದಿದ್ದೇನೆ ಎಂದು ಹೇಳುತ್ತಿರುವುದು ದಾಖಲಾಗಿದೆ.
ಸಾಲು ಸಾಲು ಆರೋಪಗಳ ಹೊರತಾಗಿಯೂ, ಹಸೀನಾ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ಪ್ರತಿವಾದಿ ವಕೀಲ ಅಮೀರ್ ಹೊಸೈನ್ ಮೂಲಕ ಹೇಳಿಕೆ ಹೊರಡಿಸಿರೋ ಮಾಜಿ ಪ್ರಧಾನಿ, ದೇಶಭ್ರಷ್ಟರಾಗಿರುವವರೆಗೂ ಕಾನೂನು ಹೋರಾಟಗಳು ಮುಂದುವರಿಯಲಿವೆ ಎಂದಿದ್ದಾರೆ.