ಸಿ.ಡಿ ಇದ್ರೆ ಬಿಡುಗಡೆ ಮಾಡಯ್ಯ ಸವದಿ ಎಂದ ಸಿದ್ದರಾಮಯ್ಯ

ಕೊಪ್ಪಳ: ಮಂಗಳೂರು ಗಲಭೆ ಕುರಿತು ಸಿಡಿ ಬಿಡುಗಡೆ ಮಾಡಿ, ಗಲಭೆ ಹಿಂದೆ ಸರ್ಕಾರದ ಕೈವಾಡವಿದೆ ಎಂದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಡಿಸಿಎಂ ಲಕ್ಷಣ ಸವದಿ, ಕುಮಾರಸ್ವಾಮಿ ಇಂತಹ ಕೊಳಕು ಹೇಳಿಕೆ ನಿಡಬಾರದು ಎಂದು ಕಿಡಿಕಾರಿದ್ದರು. ಇದೀಗ ಡಿಸಿಎಂ ಸವದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೇಜವಾಬ್ದಾರಿ ಹೇಳಿಕೆ ನೀಡುವವರಿಗೆ ಉತ್ತರ ಕೊಡಬಾರದು. ಕೊಳಕು ಅಂದ್ರೆ ಏನು? ಆಡಳಿತಾರೂಢ ಸರ್ಕಾರದ ತಪ್ಪುಗಳನ್ನು ತೋರಿಸಿದರೆ ತಪ್ಪಾ? ತಪ್ಪು ತೋರಿಸದೇ ಮುತ್ತು ಕೊಡಬೇಕಾ? ನಿಮ್ಮ ಬಳಿನೂ ಸಿ.ಡಿ ಇದ್ರೆ ಬಿಡುಗಡೆ ಮಾಡಯ್ಯ ಸವದಿ ಎಂದು ಗುಡುಗಿದರು.

ನಾನು 5 ವರ್ಷ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲ ಎಂದು ನನಗೇನು ಭ್ರಮನಿರಸನ ಆಗಿಲ್ಲ. ಬ್ಲ್ಯೂ ಫಿಲ್ಮ್ ನೋಡುವವರಿಂದ ನಾನು ಪಾಠ ಕಲಿಬೇಕಿಲ್ಲ ಎಂದು ಸವದಿಗೆ ಪರೋಕ್ಷ ಟಾಂಗ್ ನಿಡಿದರು.

ಈಗ ಮೋದಿ ಮೋದಿ ಎಂದು ಕೂಗೋದು ಫ್ಯಾಷನ್ ಆಗೋಗಿದೆ. ಆರ್ ಎಸ್ ಎಸ್ ನವರು ಇದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ. ಜಾತ್ರೆಯಲ್ಲೂ ಹಾಗೆ ಕೂಗಿದರೆ ಏನು ಪ್ರಯೋಜನ? ಅವುಗಳಿಗೆ ರಾಜಕೀಯ ಗಂಧಗಾಳಿ ಇಲ್ಲ. ಇದು ಭಟ್ಟಂಗಿತನವನ್ನು ತೋರಿಸುತ್ತೆ ಎಂದರು.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button