Belagavi NewsBelgaum NewsKannada NewsKarnataka NewsNationalPolitics

ಮಾಜಿ ಶಾಸಕ ಚಂದ್ರಶೇಖರ ಗುಡ್ಡಕಾಯು ನಿಧನ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ.ಗುಡ್ಡಕಾಯು (91 ) ಅವರು ಸೋಮವಾರ ಬೆಳಗಾವಿಯ ಮಹಾಂತೇಶ ನಗರ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. 1972 ರಲ್ಲಿ ಗೋಕಾಕ ಕಾಂಗ್ರೆಸ್ ಶಾಸಕರಾಗಿ ಅವರು ಒಂದು ಅವಧಿಗೆ ಆಯ್ಕೆಯಾಗಿದ್ದರು. ಸರಳ-ಸಜ್ಜನಿಕೆಗೆ ಹೆಸರುವಾಸಿಯಾಗಿ  ಜನಮನ ಗೆದ್ದಿದ್ದರು.

1972 ರಲ್ಲಿ ಗೋಕಾಕದಿಂದ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಮಹಾರಾಷ್ಟ್ರ ಸರಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ದಿ.ಶಂಕರರಾವ್ ಚವ್ಹಾಣರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಅಲ್ಲಿಂದ ಅವರನ್ನು ಬಿಡಿಸಿಕೊಂಡು ಬಂದ ರಾಯಬಾಗದ ವಸಂತರಾವ್ ಪಾಟೀಲ್, ಗೋಕಾಕದಿಂದ ಚುನಾವಣೆಗೆ ನಿಲ್ಲಿಸಿದರು. 

ಕೆಲ ತಿಂಗಳ ಹಿಂದೆ ಚುನಾವಣೆ ನೆನಪು ಮೆಲುಕು ಹಾಕಿದ್ದ ಚಂದ್ರಶೇಖರ ಗುಡ್ಡಕಾಯು ನಾನು ಚುನಾವಣೆಗೆ ಖರ್ಚೇ ಮಾಡಿರಲಿಲ್ಲ. ಎಲ್ಲಾ ಮಾಡಿದ್ದು, ನೋಡಿಕೊಂಡಿದ್ದು ವಸಂತರಾವ್ ಪಾಟೀಲ್. ಚುನಾವಣೆ ಗೆದ್ದಾಗ ನನ್ನನ್ನು ಮಂತ್ರಿ ಮಾಡಲು ದೇವರಾಜ ಅರಸರು ಮುಂದಾಗಿದ್ದರು ಆಗ, ಮಾಡೋದಿದ್ರೆ ವಸಂತರಾವ್ ಅವರನ್ನೇ ಮಾಡ್ರಿ ಎಂದಿದ್ದೆ ಎಂದು ಹೇಳಿದ್ದರು. 

1972 ರಲ್ಲಿ ಗುಡ್ಡಾಕಾಯು ಅವರು 28,005 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಂಸ್ಥಾ ಕಾಂಗ್ರೆಸ್ಸಿನ ಬಿ.ಎಮ್.ಪಾಟೀಲರು 11,144 ಮತ ಪಡೆದಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button