
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉದ್ಯಮಬಾಗ್‌ನ ಪ್ರಮುಖ ಕೈಗಾರಿಕೋದ್ಯಮಿ, ಬೆಳಗಾವಿಯ ಮಾಜಿ ಮೇಯರ್, ಸಾರ್ವಜನಿಕ ಗ್ರಂಥಾಲಯದ ಮಾಜಿ ಅಧ್ಯಕ್ಷರು ಮತ್ತು ಪ್ರಸ್ತುತ ನಿರ್ದೇಶಕರಾಗಿದ್ದ ಗೋವಿಂದರಾವ ಮಹಾದೇವರಾವ ರಾವುತ (78 ವರ್ಷ) ಅವರು ಶನಿವಾರ ಸಂಜೆ 7:30 ಕ್ಕೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಅವರು ಪತ್ನಿ, ಮಗ ವಿಶಾಲ, ಸೊಸೆ, ಇಬ್ಬರು ಹೆಣ್ಣುಮಕ್ಕಳು, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ದಿವಂಗತ ರಾವುತ ಅವರ ಪಾರ್ಥೀವ ಶರೀರ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಉದ್ಯಮಬಾಗ್ ಮ್ಯಾಂಗೋ ಮೆಡೋಸ್‌ನಲ್ಲಿರುವ ಅವರ ನಿವಾಸದಿಂದ ಹೊರಡಲಿದ್ದು, ಶಹಾಪುರದ ಸ್ಮಶಾನಭೂಮಿಯಲ್ಲಿ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗುವುದು.