
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಉಪಮುಖ್ಯಮಂತ್ರಿ, ಮಾಜಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಮುಪ್ಪಿನ ಕಾಡಸಿದ್ದೇಶ್ವರ ಮಠದ ಶಿವಾಪುರ ಗೋಶಾಲೆಗೆ ಅಶ್ವತ್ಥನಾರಾಯಣ ಫೌಂಡೇಷನ್ ನಿಂದ 1ಲಕ್ಷ ರೂ. ನೆರವು ನೀಡಿದ್ದಾರೆ.
ಈ ಸಹಾಯಧನವನ್ನು ಅವರು ಸ್ವಾಮೀಜಿಯವರ ಖಾತೆಗೆ ಜಮಾ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮಠ ಹಾಗೂ ಗೋಶಾಲೆಗೆ ಭೇಟಿ ನೀಡಿದ್ದ ಅಶ್ವತ್ಥನಾರಾಯಣ ಅವರು, ಸ್ವಾಮೀಜಿಯವರ ಯೋಗಕ್ಷೇಮ ವಿಚಾರಿಸಿ ಗೋವುಗಳಿಗೆ ಆಗುವ ಮೇವಿನ ತೊಂದರೆ, ಗೋವುಗಳಿಗೆ ಮಲಗಲು ಶೆಡ್ ಸಹಿತ ಇಲ್ಲದಿರುವುದನ್ನು ಪ್ರತ್ಯಕ್ಷ ಕಂಡು ಮಾಹಿತಿ ಪಡೆದಿದ್ದರು.
ಧನಸಹಾಯ ನೀಡಿದ ಬೆನ್ನಲ್ಲೇ ಅವರು ಗೋಶಾಲೆಗೆ ಒಂದು ಶೆಡ್ ನಿರ್ಮಾಣ ಮಾಡಿಕೊಡಲು ಒಪ್ಪಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ಕರ್ನಾಟಕ ಉತ್ತರ ವಿಭಾಗದ ಕೋಶಾಧ್ಯಕ್ಷ ಕೃಷ್ಣ ಭಟ್ ಅವರು ತಿಳಿಸಿದ್ದಾರೆ.