ಪ್ರವಾಹ ಪೀಡಿತ ಗ್ರಾಮಗಳಿಗೆ ಮಾಜಿ ಶಾಸಕರಾದ ಸಂಜಯ ಪಾಟೀಲ ಭೇಟಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ತಾಲೂಕಿನ ಹಿಂಡಲಗಾ, ಸುಳಗಾ, ಉಚಗಾಂವ, ಗೋಜಗಾ, ಮಣ್ಣೂರ, ಅಂಬೇವಾಡಿ, ಬೆನಕನಹಳ್ಳಿ, ಬೆಳಗುಂದಿ, ಸೋನೊಲಿ ವಿವಿಧ ಗ್ರಾಮಗಳಿಗೆ ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ ರವರು ಭೇಟಿ ನೀಡಿದರು.
ಕಳೇದ ಹನ್ನೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿ, ಗ್ರಾಮಗಳ ಮನೆಗಳಿಗೆ ಹಾಗೂ ಜಮೀನುಗಳಿಗೆ ಗ್ರಾಮಪಂಚಾಯತಿ ಅಧಿಕಾರಿಗಳನ್ನು ಕರೆದುಕೊಂಡು ಸುರಿಯುತ್ತಿರುವ ಮಳೆಯಲ್ಲಿಯೆ ಸಂಚರಿಸಿ ಜನರ ಸಮಸ್ಯೆಗಳನ್ನು ಸ್ವತಃ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ನೊಂದವರಿಗೆ ತುರ್ತಾಗಿ ಪರಿಹಾರ ಕಾರ್ಯಗಳನ್ನು ಕೈಕೊಳ್ಳಲು ಸೂಚಿಸಿದರು.
ಈ ನೆರೆಹಾವಳಿಯಿಂದ ಮನೆ ಕುಸಿತ, ಗೋಡೆ ಕುಸಿತ, ಆಸ್ತಿಪಾಸ್ತಿ ಹಾನಿ ಆದವರಿಗೆ ಸರ್ಕಾರದಿಂದ ನೆರವು ಕೊಡಿಸಲು ಅಗತ್ಯ ಕ್ರಮಕೈಗೊಳ್ಳಲು ಶ್ರಮಿಸುವುದಾಗಿ ಭರವಸೆ ನೀಡಿದರು. ಹಾನಿಗೊಳಗಾದ ಮನೆಗಳಿಗೆ, ಸೂರು ಕಳೆದುಕೊಂಡವರಿಗೆ ಹೊಸದಾಗಿ ಕಟ್ಟಡವನ್ನು ನಿರ್ಮಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಶ್ರಮಿಸುವುದಾಗಿ ಗ್ರಾಮಸ್ತರಿಗೆ ಭರವಸೆ ನೀಡಿದರು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲ ಆದರೂ ನಿರಾಶ್ರಿತರಿಗೆ ಊಟ, ವಸತಿ, ಹಾಸಿಕೊಳ್ಳಲು, ಹೊದಿಕೆ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಪೂರೈಸಲು ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಸುಳಗೇಕರ, ಪ್ರವೀಣ ಪಾಟೀಲ, ರಾಜು ಪೋಟೆ, ಮಲ್ಲಪ್ಪಾ ಪಾಟೀಲ, ಉಮಾಶಂಕರ ದೇಸಾಯಿ, ಪವನ ದೇಸಾಯಿ, ಪರಶುರಾಮ ಬೆಳಗಾಂವಕರ, ಸಂತೋಷ ಲೋಹಾರ, ಡಾ||ರಾಜು ಪಾಟೀಲ, ಪರಶುರಾಮ ಪಾತೀಲ, ಅರುಣ ಕೋಲಕಾರ, ನಾನಾ ಕಂಗ್ರಾಳಕರ, ದೇವಪ್ಪಾ ಶಿಂಧೆ, ಶಿವಾಜಿ ಅಂಬೋಳಕರ, ರವಳು ಮುಗುಟಕರ, ಯಲ್ಲಪ್ಪಾ ಪಾಟೀಲ, ಶಿವಾಜಿ ಪಾಟೀಲ, ಜ್ಯೋತಿಬಾ ಪಾಟೀಲ, ನಾರಾಯಣ ಝಂಗ್ರುಚೆ ಹಾಗೂ ಗ್ರಾಮಸ್ತರು ಪಾಲ್ಗೊಂಡಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ