Kannada NewsKarnataka NewsLatest

ವೀರಶೈವ ಲಿಂಗಾಯತ ವಿದ್ಯಾರ್ಥಿನಿ ನಿಲಯಕ್ಕೆ ಯಡಿಯೂರಪ್ಪ ಶಂಕುಸ್ಥಾಪನೆ; ಹರಿದು ಬಂತು ಲಕ್ಷ ಲಕ್ಷ ದೇಣಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವೀರಶೈವ ಲಿಂಗಾಯತ ಸಮುದಾಯದ ಬಡ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಲ್ಲಾ ವೀರಶೈವ ಮಹಾಸಭಾ ನಿರ್ಮಿಸಲಿರುವ ಉಚಿತ ವಸತಿ ನಿಲಯಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗ್ಗೆ ಶಂಕುಸ್ಥಾಪನೆ ನೆರವೇರಿಸಿದರು.

  ಈ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಕಾರಂಜಿ ಮಠದ ಗುರುಶಿದ್ಧ ಮಹಾಸ್ವಾಮಿಗಳು, ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ, ಸಂಸದೆ ಮಂಗಲ ಅಂಗಡಿ, ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್,  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ್, ಪದಾಧಿಕಾರಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಭಾವಿಕಟ್ಟಿ, ರಮೇಶ ಕಳಸನ್ನವರ ಮೊದಲಾದವರು ಉಪಸ್ಥಿತರಿದ್ದರು.

ಲಕ್ಷ, ಲಕ್ಷ ದೇಣಿಗೆ

ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕ ದ ವತಿಯಿಂದ  ಬೆಳಗಾವಿಯ  ಹೃದಯ ಭಾಗದಲ್ಲಿ ಅಂದರೆ ಸುಭಾಸ  ನಗರದಲ್ಲಿ ನಿರ್ಮಾಣ ವಾಗಲಿರುವ  ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿನಿಯರ ವಸತಿ ನಿಲಯ  ಕಟ್ಟಡದ ಶಂಕು ಸ್ಥಾಪನೆ ಯ ನ್ನು ನೆರವೇರಿಸಿದ ಮಾಜಿ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ  ಅವರು ಮಹಿಳಾ ಸಾಕ್ಷರತೆ ಹೆಚ್ಚಿಸುವಲ್ಲಿ ಈ ವಸತಿ ನಿಲಯವು ಮುಖ್ಯ ಪಾತ್ರವನ್ನು ವಹಿಸಲಿದೆ. ಗ್ರಾಮೀಣ ಪ್ರದೇಶದ  ಬಡ ವಿದ್ಯಾರ್ಥಿನಿಯ ರ ಶೈಕ್ಷಣಿಕ ಬದುಕಿಗೆ  ವರದಾನ ವಾಗಲಿದೆ ಎಂದರು
ಕೆ.ಎಲ್. ಇ ಸಂಸ್ಥೆಯ  ಕಾರ್ಯಾಧ್ಯಕ್ಷ ರೂ ಅಖಿಲ ಭಾರತ ವೀರಶೈವ ಮಹಾಸಭೆಯ ಕೇಂದ್ರ ಘಟಕದ ಉಪಾಧ್ಯಕ್ಷ ರೂ ಆಗಿರುವ ಡಾ ಪ್ರಭಾಕರ ಕೋರೆ ಅವರು ಗ್ರಾಮೀಣ ಪ್ರದೇಶದಿಂದ ಬೆಳಗಾವಿ ನಗರದ ವಿವಿಧ ಶಿಕ್ಷಣ ಸಂಸ್ಥೆ ಗಳಲ್ಲಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರು ತಮ್ಮ ಹಳ್ಳಿ ಗಳಿಂದ ದಿನವೂ ಎಡತಾ ಕುವ ಸ್ಥಿತಿ ನನ್ನ ಮನಸ್ಸನ್ನು ಕದ ಡಿತ್ತು ಅದಕ್ಕೊಂದು ಪರಿಹಾರ ಹುಡುಕುವ ಸನ್ನಾಹ ದಲ್ಲಿದ್ದಾ ಗ ಸಹಜ ವಾಗಿ ಸುಭಾಸ ನಗರದ ಇಪ್ಪತ್ತೆಂಟು ಗುಂಟೆ ಜಾಗೆ  ನಿಲಯದ ನಿರ್ಮಿತಿಗೆ ದೊರೆಯಿತು.  ಮಾಜಿ ಮು ಖ್ಯ ಮಂತ್ರಿ  ಯಡಿಯೂರಪ್ಪ ನವರನ್ನು ಒಳಗೊಂಡು ಜಿಲ್ಲಾಧಿಕಾರಿ ಗಳಾದ  ಬೊಮ್ಮನಹಳ್ಳಿ ಮತ್ತು  ಎಂ.ಜಿ.ಹಿರೇಮಠ ಅವರು ಸಹಾಯ ಸಹಕಾರ ನೀಡಿ  ನಮ್ಮ ಸಂಕಲ್ಪ ಈಡೇ ರುವಂತೆ ಮಾಡಿದ್ದಾರೆ ಅವರನ್ನು ಕೃತಜ್ಞತೆ ಯಿಂದ ಸ್ಮರಿಸುತ್ತೇವೆ ಎಂದರು.
ನ್ಯಾಯವಾದಿಗಳೂ ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲೆ ಘಟಕ
ದ ಉಪಾಧ್ಯಕ್ಷರು ಆದ ಮಾರುತಿ ಜಿರಲಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಕಾರಂಜಿಮಠ ದ   ಗುರುಸಿದ್ಧ ಮಹಾ ಸ್ವಾಮಿಗಳು,  ಸಂಸದೆ  ಮಂಗಲಾ ಅಂಗಡಿ, ಶಾಸಕಿ ಲಕ್ಷ್ಮಿ  ಹೆಬ್ಬಾಳ್ಕರ್,ವಿಧಾನ ಪರಿಷತ್ ಸದಸ್ಯ   ಚನ್ನರಾಜ ಹಟ್ಟಿಹೊಳಿ,   ಆಶಾತಾಯಿ ಕೋರೆ, ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ರುದ್ರಣ್ಣ ಹೊಸಕೇರಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿ ಲ್ಲಾ ಘಟಕದ  ಅಧ್ಯಕ್ಷೆ  ರತ್ನಪ್ರಭಾ ಬೆಲ್ಲದ  ಇದ್ದರು.
  ಇದೇ ಸಂದರ್ಭದಲ್ಲಿ  ವಸತಿ ನಿಲಯದ  ಕೊಠಡಿಗಳ ನಿರ್ಮಿತಿಗೆ   ದಾನಿಗಳು   ವಾಗ್ದಾನ ಮಾಡಿದರು. ಬೆಳಗಾವಿಯ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ವತಿಯಿಂದ ಒಂದು ಕೋಣೆಯ ನಿರ್ಮಿತಿಗೆ ಬೇಕಾದ ಐದು ಲಕ್ಷ ರೂಪಾಯಿ ಗಳನ್ನು, ಪ್ರಭಾಕರ ಕೋರೆ ಸಹಕಾರಿ ಸೌಹಾರ್ದ ಬ್ಯಾಂಕ್ ಅಂಕಲಿ ಅವರು ಎರಡು ಕೊಠಡಿ ನಿರ್ಮಿತಿಗೆ ಹತ್ತು ಲಕ್ಷ, ಸಚಿವ ಮುರುಗೇಶ್ ನಿರಾಣಿ ಎರಡು ಕೋಣೆಗಳ ನಿರ್ಮಿತಿಗೆ ಹತ್ತುಲಕ್ಷ, ರತ್ನಪ್ರಭಾ ಬೆಲ್ಲದ ,   ಜಯಶ್ರೀ ನಿರಾಕಾರಿ  ಅವರು ಗಳು ತಲಾ ಒಂದು  ಕೋಣೆಯ ನಿರ್ಮಾಣ ಮಾಡುವುದಾಗಿ, ಶಾಸಕಿ  ಲಕ್ಷ್ಮಿ ಹೆಬ್ಬಾಳಕರ ಅವರು ಊಟದ ಕೋಣೆಯ ನಿರ್ಮಿತಿ ಯ ಮತ್ತು ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರು ಅಡುಗೆ ಕೋಣೆಯ ನಿರ್ಮಿತಿಯ ವೆಚ್ಚವನ್ನು ನೀಡುವುದಾಗಿ ವಾಗ್ದಾನ ಮಾಡಿದರು.
ಸಭೆಯಲ್ಲಿ   ಅಖಿಲ ಭಾರತ  ವೀರಶೈವ ಮಹಾಸಭೆಯ ಸಮಸ್ತ ಪದಾಧಿಕಾರಿಗಳು ಗಣ್ಯರು ಉಪಸ್ಥಿತ ರಿದ್ದ ರು. ಆಶಾ ಯಮಕನ ಮರಡಿ ಪ್ರಾರ್ಥಿಸಿದರು. ಡಾ ಗುರು ದೇವಿ ಹುಲೆಪ್ಪನವರಮಠ ಕಾರ್ಯ ಕ್ರಮ ನಿರ್ವಹಿಸಿದರು.

 

ಲಿಂಗಾಯತ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೇಲ್ : 13ರಂದು ಯಡಿಯೂರಪ್ಪ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button