Kannada NewsLatest

ಹಲವು ಕನಸುಗಳನ್ನು ಬಿಚ್ಚಿಟ್ಟ ಅಥಣಿ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಇಲ್ಲಿಯ ಭೂತರಾಮನಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಥಣಿ ಶಿವಯೋಗಿಗಳ ಧ್ಯಾನ ಮಂದಿರದ ಶಿಲಾನ್ಯಾಸ ನಡೆಯಿತು. 

 ಸುಮಾರು 3.5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಮಂದಿರ ಅದ್ಭುತ ಕೇಂದ್ರವಾಗಲಿದೆ. 2.80 ಕೋಟಿ ರೂ ವೆಚ್ಚದಲ್ಲಿ ಧ್ಯಾನ ಮಂದಿರ, ಉಚಿತ ಪ್ರಸಾದ ನಿಲಯ, ವೃದ್ದಾಶ್ರಮ, ಸಮುದಾಯ ಭವನ, ಯಾತ್ರಿ ನಿವಾಸ ನಿರ್ಮಾಣ ಮೊದಲಾದ ಯೋಜನೆಗಳಿವೆ ಎಂದು ಅವರು ಹೇಳಿದರು.

ಸಮಸ್ಯೆಗಳಿರುವವರಿಗೆ ಸದಾ ಈ ಮಂದಿರ ತೆರೆದಿರುತ್ತದೆ ಎಂದು ಶ್ರೀಗಳು ಹೇಳಿದರು.

ಕಾರಂಜಿಮಠದ ಗುರುಸಿದ್ದಸ್ವಾಮಿಗಳು ಮಾತನಾಡಿ, ಇಂದಿನ ದಿನದಲ್ಲಿ ಜನರಿಗೆ ಎಲ್ಲವೂ ಇದೆ, ಆದರೆ ಮನಸ್ಸಿಗೆ ಶಾಂತಿ ಮಾತ್ರ ಇಲ್ಲವಾಗಿದೆ. ಹಾಗಾಗಿ ಇಂತಹ ಧ್ಯಾನ ಮಂದಿರದಲ್ಲಿ ಶಾಂತಿ ಸಿಗುತ್ತದೆ ಎಂದರು.

ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮಿಗಳು, ಹಿಟ್ನಿಯ ಪ್ರಭುಲಿಂಗ ಶಿವಾಚಾರ್ಯ ಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠದ ಸಾವಳಗಿ ದೇವರು, ಶೇಗುಣಶಿ ವಿರಕ್ತಮಠದ ಮಹಾಂತ ದೇವರು, ಕಾರಂಜಿಮಠದ ಶಿವಯೋಗಿ ದೇವರು ಸೇರಿದಂತೆ ಹಲವಾರು ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button